ಉಗ್ರರಿಗೆ ಆರ್ಥಿಕ ನೆರವು ಪ್ರಕರಣ: 9 ಜನರನ್ನು ವಶಕ್ಕೆ ಪಡೆದ ಎನ್ಐಎ

ಕಾಶ್ಮೀರದ ಶಾಂತಿ ಹಾಳು ಮಾಡುವ ಸಲುವಾಗಿ ನೀಡಲಾಗುತ್ತಿದ್ದ ಉಗ್ರರಿಗೆ ಆರ್ಥಿಕ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ 9 ಮಂದಿ ಆರೋಪಿಗಳನ್ನು ನ್ಯಾಯಾಲಯದ ನ.21ರ ವರೆಗೂ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಕ್ಕೆ...
ರಾಷ್ಟ್ರೀಯ ತನಿಖಾ ದಳ (ಸಂಗ್ರಹ ಚಿತ್ರ)
ರಾಷ್ಟ್ರೀಯ ತನಿಖಾ ದಳ (ಸಂಗ್ರಹ ಚಿತ್ರ)
ನವದೆಹಲಿ: ಕಾಶ್ಮೀರದ ಶಾಂತಿ ಹಾಳು ಮಾಡುವ ಸಲುವಾಗಿ ನೀಡಲಾಗುತ್ತಿದ್ದ ಉಗ್ರರಿಗೆ ಆರ್ಥಿಕ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ 9 ಮಂದಿ ಆರೋಪಿಗಳನ್ನು ನ್ಯಾಯಾಲಯದ ನ.21ರ ವರೆಗೂ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಕ್ಕೆ ನೀಡಿದೆ. 
ಕ್ಯಾಮೆರಾ ಮೂಲಕ ವಿಚಾರಣೆ ನಡೆಸಿರುವ ಜಿಲ್ಲಾ ನ್ಯಾಯಾಧೀಶೆ ಪೂನಮ್ ಬಂಬಾ ಅವರು, ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ 9 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಸುದೀರ್ಘ ವಿಚಾರಣೆ ನಡೆಸುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ. 
ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆ ಅತ್ಯಗತ್ಯವಾಗಿದ್ದು, ಆರೋಪಿಗಳು ಹಣ ಪಡೆದುಕೊಳ್ಳುತ್ತಿದ್ದ ಮೂಲ ಹಾಗೂ ಹಣವನ್ನು ಕಾಶ್ಮೀರ ಹಾಗೂ ಇನ್ನಿತರೆ ದೇಶಗಳಿಗೆ ಹೇಗೆ ಸಾಗಿಸುತ್ತಿದ್ದರು ಎಂಬೆಲ್ಲಾ ಮಾಹಿತಿಗಳು ಬಹಿರಂಗಗೊಳ್ಳುವುದು ಪ್ರಮುಖವಾಗಿದೆ. ಡಿಜಿಟಲ್ ದಾಖಲೆಗಳನ್ನು ಪರೀಶೀಲನೆ ನಡೆಸಲಾಗುತ್ತಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. 
ವಿಚಾರಣೆ ವೇಳೆ ಎನ್ಐಎ ಪ್ರಕರಣ ಸಂಬಂಧ ನಿಷೇಧಿತ ನೋಟುಗಳನ್ನು ಕಾನೂನಾತ್ಮಕ ಹಣವಾಗಿ ಹೇಗೆ ಬದಲಿಸಲಾಗುತ್ತಿದ್ದು ಎಂಬುದರ ಕುರಿತು ಬ್ಯಾಂಕ್ ಸಿಬ್ಬಂದಿಗಳು ಹಾಗೂ ಮತ್ತಷ್ಟು ಜನರನ್ನು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯದ ಮುಂದೆ ತಿಳಿಸಿದೆ. 

ಅಲ್ಲದೆ, ವಿಚಾರಣೆ ನಡೆಸುತ್ತಿದ್ದ ವೇಳೆ ಬಂಧಿತ ಆರೋಪಿಯೊಬ್ಬ ನೋಟು ನಿಷೇಧ ಮಾಡದ್ದ ಸಂದರ್ಭದಲ್ಲಿ ಹಳೆ ನೋಟುಗಳನ್ನು ಬದಲಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದ. ನೋಟುಗಳನ್ನು ಬದಲಿಸಲು ಒಂದು ಗ್ಯಾಂಗ್ ಕೆಲಸ ಮಾಡುತ್ತಿದ್ದು, ಇದಕ್ಕೆ ಕೆಲ ಬ್ಯಾಂಕ್ ಸಿಬ್ಬಂದಿಗಳು ಸಹಾಯ ಮಾಡುತ್ತಿರುವ ಶಂಕೆಗಳು ವ್ಯಕ್ತವಾಗಿವೆ ಎಂದು ಎನ್ಐಎ ಹೇಳಿಕೊಂಡಿದೆ. 

ಮಂಗಳವಾರವಷ್ಟೇ ಕಾಶ್ಮೀರದ ಹಲವೆಡೆ ದಾಳಿ ನಡೆಸಿದ್ದ ಎನ್ಐಎ ರೂ.36.5 ಕೋಟಿ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಅಲ್ಲದೆ, ಪ್ರಕರಣ ಸಂಬಂಧ ವಿಚಾರಣೆ ನಡೆಸಲಾಗುತ್ತಿರುವ ಜಮ್ಮು ಮತ್ತು ಕಾಶ್ಮೀರದ ಕೊನೌತ್ ಪ್ರದೇಶದಲ್ಲ ಜೈ ಸಿಂಗ್ ರಸ್ತೆಯಲ್ಲಿ 9 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com