ಎನ್‏ಸಿಆರ್ ವ್ಯಾಪ್ತಿಯಲ್ಲಿ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನೀತಿಗೆ ಎನ್‏ಜಿಟಿ ಅಸ್ತು

ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಸಮ-ಬೆಸ ಸಂಖ್ಯೆ ನೀತಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಸಿರು ನಿಶಾನೆ ತೋರಿದ್ದು,...
ಎನ್ ಜಿಟಿ
ಎನ್ ಜಿಟಿ
ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಎನ್ ಸಿಆರ್ ವ್ಯಾಪ್ತಿಯಲ್ಲಿ ಸಮ-ಬೆಸ ಸಂಖ್ಯೆ ನೀತಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹಸಿರು ನಿಶಾನೆ ತೋರಿದ್ದು, ದ್ವಿಚಕ್ರ ವಾಹನಗಳ ಸಂಚಾರಕ್ಕೂ ಈ ನಿಮಯ ಅನ್ವಯ ಮಾಡುವಂತೆ ಸೂಚನೆ ನೀಡಿದೆ. 
ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯದ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಇದೇ ನವೆಂಬರ್ 13ರಿಂದ 17ರವರೆಗೆ ಸಮ-ಬೆಸ ಸಂಖ್ಯೆ ನೀತಿ ಜಾರಿಮಾಡುತ್ತಿರುವುದಾಗಿ ದೆಹಲಿ ಸರ್ಕಾರ ಹೇಳಿತ್ತು. ಪ್ರಾರಂಭದಲ್ಲಿ ಸರ್ಕಾರದ ಪ್ರಸ್ತಾವನೆಯನ್ನು ತಡೆಹಿಡಿದಿದ್ದ ಹಸಿರು ನ್ಯಾಯಾಧಿಕರಣ ಮಾಲಿನ್ಯ ನಿಯಂತ್ರಣಕ್ಕೆ ಹಲವು ಪರಿಣಾಮಕಾರಿ ಕ್ರಮಗಳಿದ್ದರೂ, ಪ್ರತಿ ಬಾರಿ ಸಮ-ಬೆಸ ಕ್ರಮವನ್ನು ಮಾತ್ರ  ಆಯ್ದುಕೊಳ್ಳುತ್ತಿದ್ದೀರಿ. ಅದರ ಹೊರತಾಗಿ ಇತರೆ ಕ್ರಮಗಳ ಜಾರಿಗೆ ಸರ್ಕಾರ ಯಾಕೆ ಪ್ರಯತ್ನಿಸುತ್ತಿಲ್ಲ ಎಂದು ಕೇಳಿತ್ತು. ಆದರೆ ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ಎನ್ ಜಿಟಿ ಗ್ರೀನ್ ಸಿಗ್ನಲ್ ನೀಡಿದ್ದು, ಪಿಎಂ 10 ಮಟ್ಟ 300 ಹಾಗೂ ಪಿಎಂ 2.5 ಮಟ್ಟ 500 ದಾಟುವ ಬೆನ್ನಲ್ಲೇ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು, ಸರ್ಕಾರಿ ಅಧಿಕಾರಿಗಳು, ಮಹಿಳೆಯರು ದ್ವಿಚಕ್ರ ವಾಹನಗಳಿಗೂ ಸಮ-ಬೆಸ ಸಂಖ್ಯೆ ನೀತಿ ಅನ್ವಯವಾಗಬೇಕು ಎಂದು ಸೂಚನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com