ಪದ್ಮಾವತಿ ಸಿನಿಮಾಗಿಂತ ರಾಜಸ್ತಾನದಲ್ಲಿನ ಮಹಿಳಾ ಸಾಕ್ಷರತೆ ಮುಖ್ಯ: ಶಶಿ ತರೂರ್

ಸಂಜಯ್ ಲೀಲಾ ಭಾನ್ಸಾಲಿಯವರ ಪದ್ಮಾವತಿ ಚಿತ್ರದ ಬಿಡುಗಡೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ....
ಶಶಿ ತರೂರ್
ಶಶಿ ತರೂರ್
ನವದೆಹಲಿ: ಸಂಜಯ್ ಲೀಲಾ ಭಾನ್ಸಾಲಿಯವರ ಪದ್ಮಾವತಿ ಚಿತ್ರದ ಬಿಡುಗಡೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ರಾಜಸ್ತಾನದದಲ್ಲಿನ ಮಹಿಳಾ ಸಾಕ್ಷರತಾ ಪ್ರಮಾಣವನ್ನು ಹೈಲೈಟ್ ಮಾಡಿದ್ದಾರೆ.
ರಾಜಸ್ತಾನದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಇಡೀ ದೇಶದಲ್ಲೇ ಅತಿ ಕಡಿಮೆ ಇದ್ದು, ಪದ್ಮಾವತಿ ಸಿನಿಮಾಗಿಂತ ಮಹಿಳಾ ಸಾಕ್ಷರತೆ ಮುಖ್ಯ ಎಂದು ಕೇರಳ ಕಾಂಗ್ರೆಸ್ ಸಂಸದ ಇಂದು ಟ್ವೀಟ್ ಮಾಡಿದ್ದಾರೆ.
'ಪದ್ಮಾವತಿ' ಚಿತ್ರದ ವಿವಾದದಿಂದಾಗಿ ರಾಜಸ್ತಾನದಲ್ಲಿ ಕಳೆದ ಆರು ಶತಮಾನಗಳಿಂದ ರಾಣಿಯರಿಂದ ಈಗೀನ ಮಹಿಳೆಯರ ಸ್ಥಿತಿಗತಿಗಳನ್ನು ತಿಳಿಯಲು ಒಂದು ಅವಕಾಶ ಸಿಕ್ಕಿದ್ದು, ರಾಜಸ್ತಾನದ ಮಹಿಳಾ ಸಾಕ್ಷರತೆ ಪ್ರಮಾಣ ದೇಶದಲ್ಲೇ ಅತ್ಯಂತ ಕಡಿಮೆ. ಈ ವಿವಾದಕ್ಕಿಂತ ಶಿಕ್ಷಣ ಬಹಳ ಮುಖ್ಯ ಎಂದು ತರೂರ್ ಟ್ವೀಟ್ ಮಾಡಿದ್ದಾರೆ. 
ಪದ್ಮಾವತಿ ಚಿತ್ರದ ಬಿಡುಗಡೆ ವಿರೋಧಿಸಿ ನಿನ್ನೆಯಷ್ಟೇ ಸೂರತ್ ನಲ್ಲಿ ರಜಪೂತ ಸಮೂದಾಯ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಜಂಟಿಯಾಗಿ ಪ್ರತಿಭಟನೆ ನಡೆಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com