ವೈಷ್ಣೋದೇವಿಗೆ ಇನ್ಮುಂದೆ ದಿನಕ್ಕೆ 50 ಸಾವಿರ ಯಾತ್ರಿಕರಿಗೆ ಮಾತ್ರ ಪ್ರವೇಶ: ಎನ್'ಜಿಟಿ

ಪುರಾಣ ಪ್ರಸಿದ್ಧ ವೈಷ್ಣೋದೇವಿ ದರ್ಶನಕ್ಕೆ ನಿತ್ಯ ತೆರಳುವ ಯಾತ್ರಿಕರ ಸಂಖ್ಯೆಯನ್ನು 50,000ಕ್ಕೆ ರಾಷ್ಟ್ರೀಯ ಹಸಿರು ಪೀಠ (ಎನ್'ಜಿಟಿ) ಇಳಿಕೆ ಮಾಡಿದೆ ಎಂದು ಸೋಮವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಪುರಾಣ ಪ್ರಸಿದ್ಧ ವೈಷ್ಣೋದೇವಿ ದರ್ಶನಕ್ಕೆ ನಿತ್ಯ ತೆರಳುವ ಯಾತ್ರಿಕರ ಸಂಖ್ಯೆಯನ್ನು 50,000ಕ್ಕೆ ರಾಷ್ಟ್ರೀಯ ಹಸಿರು ಪೀಠ (ಎನ್'ಜಿಟಿ) ಇಳಿಕೆ ಮಾಡಿದೆ ಎಂದು ಸೋಮವಾರ ತಿಳಿದುಬಂದಿದೆ. 
ಈ ಕುರಿತಂತೆ ಮಾಹಿತಿ ನೀಡಿರುವ ರಾಷ್ಟ್ರೀಯ ಹಸಿರು ಪೀಠ, ವೈಷ್ಟೋದೇವಿ ದೇಗುಲದಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರತೀನಿತ್ಯ ಕೇವಲ 50,000 ಯಾತ್ರಾರ್ಥಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದೆ. 
ದರ್ಶನಕ್ಕೆ ಪ್ರತೀನಿತ್ಯ 50,000ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಯಾತ್ರಿಕರನ್ನು ಅರ್ಧ್'ಕುಮಾರಿ ಅಥವಾ ಕತ್ರ ಬಳಿಯೇ ತಡೆ ಹಿಡಿಯಲಾಗುತ್ತದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com