ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸುಧಾರಣೆ

ಕಳೆದ ಒಂದು ವಾರದಲ್ಲಿ ಮೊದಲ ಬಾರಿಗೆ ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿರುವ ಬಗ್ಗೆ ವರದಿಗಳಾಗಿವೆ.
ದೆಹಲಿ
ದೆಹಲಿ
ನವದೆಹಲಿ: ಕಳೆದ ಒಂದು ವಾರದಲ್ಲಿ ಮೊದಲ ಬಾರಿಗೆ ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿರುವ ಬಗ್ಗೆ ವರದಿಗಳಾಗಿವೆ.
ಈ ಹಿಂದಿನ ವಾರ 15 ಪ್ರದೇಶಗಳ ಪೈಕಿ 6 ಪ್ರದೇಶಗಳಲ್ಲಿ ತೀವ್ರವಾದ ವಾಯುಮಾಲಿನ್ಯ ಪ್ರಮಾಣ ದಾಖಲಾಗಿತ್ತು. ಈ ವಾರ ವಾಯು ಗುಣಮಟ್ಟ ಸುಧಾರಣೆ ಕಂಡಿದ್ದು, ಅಪಾಯಕಾರಿ ಮಟ್ಟದಿಂದ ಕಳಪೆ ಮಟ್ಟಕ್ಕೆ ಇಳಿಕೆಯಾಗಿದೆ. ಮುಂದಿನ ವಾರಗಳಲ್ಲಿ ಮತ್ತಷ್ಟು ಸುಧಾರಣೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ನ.07 ರಿಂದ ವಾಯು ಗುಣಮಟ್ಟ ಸುಧಾರಣೆ ಕಾಣುತ್ತಿದ್ದು, ಅಪಾಯಕಾರಿ ಮಟ್ಟದಿಂದ ಕಳಪೆ ಗುಣಮಟ್ಟಕ್ಕೆ ಇಳಿಕೆಯಾಗಿರುವುದಕ್ಕೇ ಸಂತಸಪಡುವಂತಾಗಿರುವುದು ದುರದೃಷ್ಟಕರ ಎಂದು ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com