ಐಎಫ್‌ ಎಫ್‌ ಐ ತೀರ್ಪುಗಾರರ ತಂಡದ ಮುಖ್ಯಸ್ಥ (ಜ್ಯೂರಿ) ಸುಜಯ್ ಘೋಷ್ ರಾಜೀನಾಮೆ

ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ ಎಫ್‌ ಐ) ದ ತೀರ್ಪುಗಾರರ ತಂಡದ ಮುಖ್ಯಸ್ಥ (ಜ್ಯೂರಿ)ಸ್ಥಾನಕ್ಕೆ ಸುಜಯ್ ಘೋಷ್ ರಾಜೀನಾಮೆ ನೀಡಿದ್ದಾರೆ.
ಸುಜಯ್ ಘೋಷ್
ಸುಜಯ್ ಘೋಷ್
ಮುಂಬೈ: ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ ಎಫ್‌ ಐ) ದ ತೀರ್ಪುಗಾರರ ತಂಡದ ಮುಖ್ಯಸ್ಥ (ಜ್ಯೂರಿ) ಸ್ಥಾನಕ್ಕೆ ಸುಜಯ್ ಘೋಷ್  ರಾಜೀನಾಮೆ ನೀಡಿದ್ದಾರೆ.
ಈ ತಿಂಗಳು ಗೋವಾದಲ್ಲಿ ನಡೆಯಲಿದ್ದ 48ನೇ ಚಿತ್ರೋತ್ಸವಕ್ಕೆ ತೀರ್ಪುಗಾರರು ಆಯ್ಕೆ ಮಾಡಿದ್ದ ಚಿತ್ರಗಳ ಪೈಕಿ ಮಲಯಾಳಂನ ‘ಎಸ್ ದುರ್ಗಾ’ ಮತ್ತು ಮರಾಠಿಯ ‘ನ್ಯೂಡ್’ ಚಿತ್ರಗಳನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯು ತಿರಸ್ಕರಿಸಿತ್ತು. ತೀರ್ಪುಗಾರರ ತಂದದ ಪ್ರಮುಖರಾದ ತಮ್ಮ ಬಳಿ ಯಾವ ಸಮಾಲೋಚನೆಯನ್ನೂ ನಡೆಸದೆ ಚಿತ್ರಗಳನ್ನು ತಿರಸ್ಕರಿಸಲಾಗಿದೆ. ಇದರಿಂದ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷ್ ತಿಳಿಸಿದರು.
13 ಮಂದಿ ತೀರ್ಪುಗಾರರನ್ನೊಳಗೊಂಡ ತಂಡವು ಐಎಫ್‌ ಎಫ್‌ ಐನ ಭಾರತೀಯ ಪನೋರಮಾ ವಿಭಾಗದಲ್ಲಿ ಒಟ್ಟು 26 ಚಲನಚಿತ್ರಗಳನ್ನು ಆಯ್ಕೆ ಮಾಡಿತ್ತು. 
ಸಂಜಯ್ ಘೋಷ್ ಬಾಲಿವುಡ್ ನ ಹಿಟ್ ಚಿತ್ರ 'ಕಹಾನಿ' ಯ ನಿರ್ದೇಶಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com