ಚಿದಂಬರಂ, ಕುಟುಂಬದ ವಿರುದ್ಧದ ಐಟಿ ಆದೇಶ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಕುಟುಂಬದ ವಿರುದ್ಧ....
ಪಿ ಚಿದಂಬರಂ
ಪಿ ಚಿದಂಬರಂ
ಚೆನ್ನೈ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಕುಟುಂಬದ ವಿರುದ್ಧ ತೆರಿಗೆ ಪಾವತಿ ಕೋರಿ ಆದಾಯ ತೆರಿಗೆ ಇಲಾಖೆ ಹೊರಡಿಸಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ಚಿದಂಬರಂ ಹಾಗೂ ಅವರ ಕುಟುಂಬ ಒಡೆತನದ ಕಾಫಿ ಎಸ್ಟೇಟ್ ನ ಆದಾಯ ಮರು-ಪರಿಶೀಲಿಸದ ನಂತರ 2008-09ನೇ ಸಾಲಿನ ಬಾಕಿ ಇರುವ 6 ಲಕ್ಷ ರುಪಾಯಿ ಆದಾಯ ತೆರಿಗೆಯನ್ನು ಪಾವತಿಸುವಂತೆ ಚೆನ್ನೈ ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು ಮಾರ್ಚ್ 31, 2016ರಲ್ಲಿ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ಟಿಎಸ್ ಸಿವಜ್ಞಾನಮ್ ಅವರು ರದ್ದುಗೊಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಹಾಗೂ ಇತರರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕರ್ನಾಟಕದ ಕೊಡಗಿನಲ್ಲಿರುವ ಚಿದಂಬರಂ ಅವರ ಕಾಫಿ ಎಸ್ಟೇಟ್ ನಲ್ಲಿ ಮಾರಾಟವಾದ ಕಾಫಿ ಮತ್ತು ಮೆಣಸಿಗೆ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಆದಾಯ ತೆರಿಗೆ ಇಲಾಖೆ ಕಾಯ್ದೆಯ ಸೆಕ್ಷನ್ 10(1)ರಡಿ ಕೃಷಿ ಆದಾಯಕ್ಕೆ ತೆರಿಗೆ ಇಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com