ಕೇರಳ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ಪ್ರಕರಣ, ಮೂವರು ಶಂಕಿತರು ಪೋಲೀಸರ ವಶ

ರಳದ ಗುರುವಾಯೂರ್ ನಲ್ಲಿ 28 ವರ್ಷದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಕಾರ್ಯಕರ್ತನ ಕೊಲೆ ಸಂಬಂಧ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತ್ರಿಶೂರ್: ಕೇರಳದ ಗುರುವಾಯೂರ್ ನಲ್ಲಿ 28 ವರ್ಷದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಕಾರ್ಯಕರ್ತನ ಕೊಲೆ ಸಂಬಂಧ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.
ಭಾನುವಾರ ಆರ್ ಎಸ್ ಎಸ್ ಕಾರ್ಯಕರ್ತ ಆನಂದ್, ತನ್ನ ಮನೆಯ ಸಮೀಪ ಸ್ನೇಹಿತನೊದನೆ ಬೈಕಿನಲ್ಲಿ ತೆರಳುತ್ತಿದ್ದಾಗ ಮೂರು ವ್ಯಕ್ತಿಗಳಿದ್ದ ಗ್ಯಾಂಗ್ ಒಂದು ಅವರ ಮೇಲೆ ದಾಳಿ ನಡೆಸಿತ್ತು. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಾರನ್ನು ಆನಂದ್ ಆವರಿದ್ದ ಬೈಕ್ ಗೆ ಗುದ್ದಿದರು. ಆ ನಂತರ ಮಾರಕಾಸ್ತ್ರಗಳಿಂದ ಅವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಇದೀಗ ಫೈಜ್, ಜಿತೇಶ್ ಹಾಗೂ ಕಾರ್ತಿ ಎನ್ನುವ ಮೂವರನ್ನು ಕೊಲೆ ಆರೋಪದ ಮೇಲೆ ಪೋಲೀಸರು ಬಂಧಿಸಿದ್ದಾರೆ.
"ಪ್ರಕರಣ ಸಂಬಂಧ ಮೂವರು ಶಂಕಿತರನ್ನು  ನಾವು ಬಂಧಿಸಿದ್ದೇವೆ. ಆರೋಪಿಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದೆ. ಆರೋಪಿಗಳು ಪತ್ತೆಯಾದ ತಕ್ಷಣ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ "ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ತನಿಖಾಧಿಕಾರಿಗಳು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ನಡೆದ ಸಿಪಿಎಂ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಲ್ಲಿ ಆನಂದ್ ಸಹ ಒಬ್ಬರಾಗಿದ್ದರು. ಅವರು ಜಾಮೀನಿನ ಮೇಲೆ ಹೊರ ಬಂದಿದ್ದರೆಂದು ಪೋಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com