ಕೇರಳ ಸರ್ಕಾರದ 3ನೇ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ಮೂರನೇ ವಿಕೆಟ್ ಪತನವಾಗಿದ್ದು ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ ನೀಡಿದ್ದಾರೆ...
ಥಾಮಸ್ ಚಾಂಡಿ
ಥಾಮಸ್ ಚಾಂಡಿ
ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ಮೂರನೇ ವಿಕೆಟ್ ಪತನವಾಗಿದ್ದು ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ ನೀಡಿದ್ದಾರೆ. 
ಕೇರಳ ಹೈರ್ಕೋಟ್ ಸಹ ಥಾಮಸ್ ಚಾಂಡಿ ವಿರುದ್ಧ ನಿನ್ನೆ ಕಿಡಿಕಾರಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಪಿಣರಾಯಿ ಅವರ ಜತೆ 40 ನಿಮಿಷಗಳ ಕಾಲ ಚರ್ಚೆ ನಡೆಸಿದ ಬಳಿಕ ಸಾರಿಗೆ ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ ನೀಡಿದ್ದಾರೆ. ಇದರೊಂದಿಗೆ ಕಳೆದ ಒಂದು ವರ್ಷದಲ್ಲಿ ಪಿಣರಾಯಿ ವಿಜಯನ್ ಸರ್ಕಾರದ ಮೂವರು ಸಚಿವರು ರಾಜಿನಾಮೆ ನೀಡಿದ್ದಂತಾಗಿದೆ. 
ಥಾಮಸ್ ಚಾಂಡಿ ಅವರು ಆಲಪ್ಪುಯ ಜಿಲ್ಲೆಯ ಮಾರ್ತಾಂಡಂ ಸರೋವರ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರು. ಈ ಬಗ್ಗೆ ರಾಜ್ಯ ಸರ್ಕಾರವು ವರದಿ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಿತ್ತು. ಜಿಲ್ಲಾಧಿಕಾರಿ ಸಲ್ಲಿಸಿದ್ದ ವರದಿಯಲ್ಲಿ ಥಾಮಸ್ ಚಾಂಡಿ ಒತ್ತುವರಿ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. 
ಪಿಣರಾಯಿ ಸರ್ಕಾರದ ಸಚಿವರಾಗಿದ್ದ ಜಯರಾಜನ್ ಸಂಬಂಧಿಕರಿಗೆ ಸರ್ಕಾರಿ ಹುದ್ದೆ ನೀಡಿದ ಆರೋಪದ ಮೇಲೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರ ಲೈಂಗಿಕ ಹಗರಣದಲ್ಲಿ ಎನ್ಸಿಪಿಯ ಎಕೆ ಶಶೀಂದ್ರನ್ ರಾಜಿನಾಮೆ ನೀಡಿದ್ದರು. ಶಶೀಂದ್ರರು ರಾಜಿನಾಮೆ ನೀಡಿದ ಹುದ್ದೆಗೆ ಅದೇ ಪಕ್ಷದ ಥಾಮಸ್ ಚಾಂಡಿ ಸಚಿವರಾಗಿ ಸೇರ್ಪಡೆಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com