ದೆಹಲಿ ಸುಲ್ತಾನ್ ತುಘಲಕ್ ಸಹ ನೋಟು ನಿಷೇಧ ಜಾರಿ ಮಾಡಿದ್ದ: ಯಶವಂತ್ ಸಿನ್ಹಾ

4 ನೇ ಶತಮಾನದ ದೆಹಲಿ ಸುಲ್ತಾನ್ ಮುಹಮ್ಮದ್ ಬಿನ್ ತುಘಲಕ್ 700 ವರ್ಷಗಳ ಹಿಂದೆಯೇ ನೋಟು ನಿಷೇಧವನ್ನು ಜಾರಿಗೆ ತಂದಿದ್ದನು.....
ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ
ನವದೆಹಲಿ: 14 ನೇ ಶತಮಾನದ ದೆಹಲಿ ಸುಲ್ತಾನ್ ಮುಹಮ್ಮದ್ ಬಿನ್ ತುಘಲಕ್ 700 ವರ್ಷಗಳ ಹಿಂದೆಯೇ ನೋಟು ನಿಷೇಧವನ್ನು ಜಾರಿಗೆ ತಂದಿದ್ದನು ಎಂದು ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ನುಡಿದರು. ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಸಿನ್ಹಾ , ಮೋದಿ ಅವರ ನೋಟು  ನಿಷೇಧ ಕ್ರಮವನ್ನು ಟೀಕಿಸಿದರು.
ಮೋದಿ ಕ್ರಮದ ವಿರುದ್ಧ ಟೀಕೆಗಳನ್ನು ಮುಂದುವರಿಸಿದ ಸಿನ್ಹಾ  "ಬಹುತೇಕ ಎಲ್ಲಾ ರಾಜರೂ ತಮ್ಮದೇ ಆದ ಹೊಸ ನಾಣ್ಯ, ನೋಟುಗಳನ್ನು ಚಲಾವಣೆಗೆ ತಂದಿದ್ದರು. ಆದರೆ ಅವರಾರೂ ಅವರಿಗಿಂತ ಹಿಂದೆ ಚಲಾವಣೆಯಲ್ಲಿದ್ದ ನೋಟುಗಳನ್ನು ಹಿಂಪಡೆದಿರಲಿಲ್ಲ. ಆದರೆ ದೆಹಲಿಯ ಮಹಮದ್ ಬಿನ್ ತುಘಲಕ್ ಮಾತ್ರ ತಾನು ಹೊಸ ನಾಣ್ಯ ಜಾರಿಗೆ ತರುವ ಮುನ್ನ ಇದುವರೆಗಿದ್ದ ಹಳೆಯ ನಾಣ್ಯಗಳನ್ನು, ನೋಟುಗಳನ್ನು ನಿಷೇಧಿಸಿದ್ದನು" ಸಿನ್ಹಾ ವಿವರಣೆ ನೀಡಿದರು.
"ಹೀಗಾಗಿ, ನಾವು 700 ವರ್ಷಗಳ ಹಿಂದೆ ಅಪನಗದೀಕರಣವನ್ನು ಕಂಡಿದ್ದೇವೆ ಎನ್ನಬಹುದು. ತುಘಲಕ್ ತನ್ನ ರಾಜಧಾನಿಯನ್ನು ದೆಹಲಿಯಿಂದ ದೌಲಾಟಾಬಾದ್ಗೆ ಸ್ಥಳಾಂತರಗೊಳಿಸಿ ಕುಖ್ಯಾತನಾಗಿದ್ದನು."
ನಿರುದ್ಯೋಗವು ಇಂದು ದೇಶದ ಅತಿ ದೊಡ್ಡ ಸಮಸ್ಯೆಯಾಗಿದೆ ಎಂದು ಸಿನ್ಹಾ ಹೇಳಿದ್ದಾರೆ. ಯಶವಂತ್ ಸಿನ್ಹಾ ಅವರು ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com