ಮನೆಯೊಳಗೆ ಚಿತೆ ಸಿದ್ಧಪಡಿಸಿಕೊಂಡು ತಾನೇ ಬೆಂಕಿ ಹಚ್ಚಿಕೊಂಡ ಮಹಿಳೆ

90 ವರ್ಷದ ವೃದ್ಧೆಯೊಬ್ಬರು ತಮ್ಮ ಮನೆಯೊಳಗೆ ತಾವೇ, ಚಿತೆ ಸಿದ್ಧಪಡಿಸಿಕೊಂಡು, ಬೆಂಕಿಗಾಹುತಿಯಾದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮುಂಬಯಿ: 90 ವರ್ಷದ ವೃದ್ಧೆಯೊಬ್ಬರು ತಮ್ಮ ಮನೆಯೊಳಗೆ ತಾವೇ, ಚಿತೆ ಸಿದ್ಧಪಡಿಸಿಕೊಂಡು, ಬೆಂಕಿಗಾಹುತಿಯಾದ ಘಟನೆ ಮಹಾರಾಷ್ಟ್ರದ  ಕೊಲ್ಲಾಪುರ ಜಿಲ್ಲೆಯ ಬಮಾನಿ ಗ್ರಾಮದಲ್ಲಿ ನಡೆದಿದೆ.
ಕಲ್ಲವ್ವ ದಾಡು ಕಾಂಬ್ಳೆ ಸಾವಿಗೆ ಶರಣಾದ ವೃದ್ಧೆ. ಈಕೆಯ 57 ವರ್ಷದ ಮಗ ವಿಟ್ಟಲ್ ಪಕ್ಕದ ಮನೆಯಲ್ಲಿಯೇ ಇದ್ದು, ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಊಟ-ತಿಂಡಿಗೂ ಕಲ್ಲವ್ವ ಮಗನನ್ನೇ ಆಶ್ರಯಿಸಿದ್ದರು.
ನ.13ರ ರಾತ್ರಿಯೂ ಮೊಮ್ಮಗಳು ಮನೆಗೆ ಬಂದು ಊಟ ಕೊಟ್ಟು ಹೋಗಿದ್ದಳು. ಮಾರನೇ ದಿನ ಮೊಮ್ಮಗಳು ಮತ್ತೆ ಹಾಲು ಕೊಡಲು ಬಂದಾಗ ಅಜ್ಜಿ ಬಾಗಿಲು ತೆಗೆದಿಲ್ಲ. ಹೋಗಿ, ತಂದೆಯನ್ನು ಕೂಗಿದ್ದಾಳೆ. ಮಗ ಬಂದು ನೋಡಿದಾಗ, ಕಲ್ಲವ್ವ ಕಟ್ಟಿಗೆ ಹಾಗೂ ಹಸುವಿನ ಸಗಣಿಯಿಂದ ಚಿತೆ ಮಾಡಿಕೊಂಡು ನಂತರ ಸೀಮೆಎಣ್ಣೆ  ಹಚ್ಚಿಕೊಂಡು ಬೆಂಕಿಗಾಹುತಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂಟಿ ಜೀವನ ನಡೆಸಿ ಬೇಸತ್ತಿದ್ದ ಮಹಿಳೆ ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com