ಶ್ರೀನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೌದು..ಪಿಒಕೆ ಪಾಕಿಸ್ತಾನಕ್ಕೆ ಸೇರಿದ್ದು ಎಂದು ನಾನೇ ಹೇಳಿದ್ದೆ, ಅದು ವಾಸ್ತವ ಕೂಡ..ಪಾಕಿಸ್ತಾನದಿಂದ ಪಿಒಕೆಯನ್ನು ಭಾರತ ಕಿತ್ತುಕೊಳ್ಳುಲ ಪ್ರಯತ್ನಿಸಿದರೆ ಅದು ನೋಡಿಕೊಂಡು ಸುಮ್ಮನಿರುವುದಿಲ್ಲ. ಖಂಡಿತಾ ಭಾರತದೊಂದಿಗೆ ಯುದ್ಧ ಮಾಡುತ್ತದೆ. ದೆಹಲಿಯಲ್ಲಿ ಕುಳಿತವರು ಬಾಯಿಗೆ ಏನು ಬೇಕಾದರೂ ಮಾತನಾಡಬಹುದು. ಆದರೆ ಅದರ ಪರಿಣಾಮವನ್ನು ಗಡಿಯಲ್ಲಿರುವ ನಾವುಗಳು ಅನುಭವಿಸುತ್ತೇವೆ. ಪಾಕಿಸ್ತಾನದ ಬಳಿಯೂ ಅಣುಬಾಂಬ್ ಗಳಿದ್ದು, ನಿತ್ಯ ಬಾಂಬ್ ಸ್ಫೋಟಗಳ ನಡುವೆ ಸಮಸ್ಯೆ ಅನುಭವಿಸುತ್ತಿರುವ ನಮ್ಮ ಬಗ್ಗೆ ನಿಮಗೆ ಗೊತ್ತಿಲ್ಲ..ನಿತ್ಯ ನಾವು ಬಾಂಬ್ ಸ್ಫೋಟಗಳ ನಡುವೆ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.