ಭಾರತ ತನ್ನನ್ನು ಗಡಿಪಾರು ಮಾಡಿಸಿಕೊಳ್ಳುವುದರ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ತನ್ನನ್ನು ರಕ್ಷಣಾತ್ಮವಾಗಿ ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ ವಿಜಯ್ ಮಲ್ಯಾ, "ಸೋನಿಯಾ ಅಳಿಯ ವಾದ್ರಾ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಂತೆ ನಾನು ಕೂಡ ಓರ್ವ ರಾಜಕೀಯ ಬಲಿಪಶುವಾಗಿದ್ದೇನೆ' ಎಂದು ಹೇಳಿದ್ದರು. ಮಲ್ಯಾ ಹೇಳಿಕೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ವಿಜಯ್ ಮಲ್ಯ ವಿರುದ್ಧ ಕಿಡಿಕಾರಿರುವ ರಾಬರ್ಟ್ ವಾದ್ರಾ, "ನಾನು ರಾಜಕೀಯ ಬಲಿಪಶು ಇರಬಹುದು.. ಆದರೆ ನಾನೆಂದೂ ನನ್ನ ಸ್ಥಾನಮಾನವನ್ನು ದುರಪಯೋಗ ಪಡಿಸಿಕೊಂಡಿಲ್ಲ ಮತ್ತು ಬೇರೆಯವರ ಹಣವನ್ನು ನುಂಗಿ ಹಾಕಿ ವಿದೇಶಕ್ಕೆ ಪಲಾಯನ ಮಾಡಿಲ್ಲ' ಎಂದು ತಿರುಗೇಟು ನೀಡಿದ್ದಾರೆ.