ಬಾಲಿವುಡ್ ನ ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಆದ್ದರಿಂದ ನಮ್ಮ ಇತಿಹಾಸವನ್ನು ತಿರುಚಿರುವ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ವಿಜಯ್ ರೂಪಾನಿ ತಿಳಿಸಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ತಾನದ ನಂತರ ಗುಜರಾತ್ ನಲ್ಲಿಯೂ ಪದ್ಮಾವತಿ ಚಿತ್ರ ನಿಷೇಧಗೊಳ್ಳುವ ಸಾಧ್ಯತೆ ಇದ್ದು ಒಟ್ಟಾರೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಚಿತ್ರದ ಪ್ರದರ್ಶನವನ್ನು ತಮ್ಮ ರಾಜ್ಯಗಳಲ್ಲಿ ನಿಷೇಧಿಸುವುದಾಗಿ ತಿಳಿಸಿದ್ದಾರೆ.