ಕಲ್ಲು ತೂರಾಟಗಾರರಿಗೆ ಒಂದು ಬಾರಿ ಕ್ಷಮಾದಾನ: ಜಮ್ಮು-ಕಾಶ್ಮೀರ ಸರ್ಕಾರ ಫೋಷಣೆ!

ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದ್ದ ಕಲ್ಲು ತೂರಾಟಗಾರರ ಕುರಿತು ಸಿಎಂ ಮೆಹಬೂಬ ಮುಫ್ತಿ ಸರ್ಕಾರ ಮೃದು ಧೋರಣೆ ತಳೆದಂತಿದ್ದು, ಕಲ್ಲು ತೂರಾಟಗಾರರಿಗೆ ಕ್ಷಮಾದಾನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದ್ದ ಕಲ್ಲು ತೂರಾಟಗಾರರ ಕುರಿತು ಸಿಎಂ ಮೆಹಬೂಬ ಮುಫ್ತಿ ಸರ್ಕಾರ ಮೃದು ಧೋರಣೆ ತಳೆದಂತಿದ್ದು, ಮೊದಲ ಬಾರಿಗೆ ಕಲ್ಲು ತೂರಾಟ ಮಾಡಿ ಸಿಕ್ಕಿ ಬೀಳುವ ಯುವಕರಿಗೆ ಕ್ಷಮಾದಾನ ನೀಡಿದೆ.
ಈ ಬಗ್ಗೆ ಸ್ವತಃ ಸಿಎಂ ಮುಫ್ತಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಬದಲಾಗುತ್ತಾರೆ ಎನ್ನುವುದಾದರೆ ಕ್ಷಮೆ ನೀಡುವುದರಲ್ಲಿ ತಪ್ಪಿಲ್ಲ.. ಕ್ಷಮೆ ನೀಡುವುದರ ಮೂಲಕ ರಾಜ್ಯದಲ್ಲಿ ಶಾಂತಿಯ ಹೊಸ  ಅಧ್ಯಾಯ  ಆರಂಭಿಸುವುದರಲ್ಲಿ ನನಗೆ ತೃಪ್ತಿ ಇದೆ. ಮೊದಲ ಬಾರಿಗೆ ಕಲ್ಲು ತೂರಾಟ ಪ್ರಕರಣಗಳಲ್ಲಿ ಸಿಕ್ಕಿ ಬೀಳುವರರ ವಿರುದ್ಧ ಎಫ್ ಐಆರ್ ಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
2016ರ ಮೇ ತಿಂಗಳಿನಿಂದ ಕಾಶ್ಮೀರದಲ್ಲಿ ಉಂಟಾಗಿದ್ದ ಸಂಘರ್ಷ ಪರಿಸ್ಥಿತಿಯನ್ನು ತನ್ನ ಸರ್ಕಾರ ನಿಯಂತ್ರಣಕ್ಕೆ ತಂದಿದೆ. ಕಲ್ಲು ತೂರಾಟ ಮತ್ತು ಹಿಂಸಾಚಾರದ ಮೂಲಕ ಕುಟುಂಬಗಳಿಂದ ದೂರ ಉಳಿದಿದ್ದ ಯುವಕರು  ಇನ್ನಾದರೂ ಸಮಾಜ ವಿದ್ರೋಹಿ ಕಾರ್ಯಗಳಿಂದ ದೂರಉಳಿದು, ಕುಟುಂಬದೊಂದಿಗೆ ಹೊಸ ಬಾಂಧವ್ಯ ನಿರ್ಮಾಣ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಾಶ್ಮೀರ ಸಂಘರ್ಷ ಹಾಗೂ ವಿವಾದ ಸಂಬಂಧ ಕೇಂದ್ರ ಸರ್ಕಾರ ದಿನೇಶ್ವರ ಶರ್ಮಾ ಅವರನ್ನು ಮಧ್ಯವರ್ತಿಯನ್ನಾಗಿ ನೇಮಿಸಿತ್ತು. ಅವರ ಸಲಹೆ ಮೇರೆಗೆ ಇದೀಗ ಸುಮಾರು 4500 ಕಲ್ಲು ತೂರಾಟಗಾರರ ಮೇಲಿನ ಪ್ರಕರಣಗಳನ್ನು  ಕೈ ಬಿಡಲಾಗಿದೆ ಎಂದು ಹೇಳಲಾಗಿದೆ. 
ಕಳೆದ ವಾರವಷ್ಟೇ ಸ್ನೇಹಿತನ ಸಾವಿನ ಬಳಿಕ ಲಷ್ಕರ್ ಸಂಘಟನೆ ಸೇರಿದ್ದ ಉಗ್ರನೋರ್ವ ತಾಯಿಯ ಕಣ್ಣೀರಿಗೆ ಕರಗಿ ಪೊಲೀಸರಿಗೆ ಶರಣಾಗಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com