ಭಯೋತ್ಪಾದಕರಿಗೆ 'ಸೈಬರ್ ಸ್ಪೇಸ್' ಆಟದ ಅಂಗಳವಾಗಬಾರದು: ಪ್ರಧಾನಿ ಮೋದಿ

ಸೈಬರ್ ಸ್ಪೇಸ್ ಭಯೋತ್ಪಾದಕರು ಮತ್ತು ಮೂಲಭೂತವಾದಿಗಳಿಗೆ ಆಟದ ಆಂಗಣವಾಗದಂತೆ ನೋಡಿಕೊಳ್ಳುವ ಹೊಣೆ ದೇಶದ ಜನತೆಯ ಮೇಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ  ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on
ನವದೆಹಲಿ: ಸೈಬರ್ ಸ್ಪೇಸ್ ಭಯೋತ್ಪಾದಕರು ಮತ್ತು ಮೂಲಭೂತವಾದಿಗಳಿಗೆ ಆಟದ ಆಂಗಳವಾಗದಂತೆ ನೋಡಿಕೊಳ್ಳುವ ಹೊಣೆ ದೇಶದ ಜನತೆಯ ಮೇಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ  ಮೋದಿಯವರು ಗುರುವಾರ ಹೇಳಿದ್ದಾರೆ. 
ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸೈಬರ್ ಸ್ಪೇಟ್ ಜಾಗತಿಕ ಸಮಾವೇಶದಲ್ಲಿ ಮಾತನಾಡಿರುವ ಅವರು, ಸಮಾಜದ ದುರ್ಬಲ ವಿಭಾಗದವರು ಸೈಬರ್ ಕ್ರಿಮಿನಲ್ ಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಸೈಬರ್ ಭದ್ರತೆ ಕುರಿತ ಕಾಳದಿ ಜೀವನದ ಹಾದಿಯಾಗಬೇಕು. ಸೈಬರ್ ಸ್ಪೇಸ್ ಭಯೋತ್ಪಾದಕರು ಮತ್ತು ಮೂಲಭೂತವಾದಿಗಳ ಆಟದ ಅಂಗಳವಾಗದಂತೆ ದೇಶದನ ಜನತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ. 
ಸೈಬರ್ ಭದ್ರತೆಯಂತಹ ವಿಷಯಗಳತ್ತ ಜಾಗತಿಕ ಸಮುದಾಯ ಗಮನ ಹರಿಸಬೇಕು. ಸೈಬರ್-ಸ್ಪೇಟ್ ತಾಂತ್ರಿಕತೆ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ. 
ಜನ್ ಧನ್ ಬ್ಯಾಂಕ್ ಖಾತೆಗಳು, ಆಧಾರ್ ಹಾಗೂ ಮೊಬೈಲ್ ಫೋನ್ ಈ ಮೂರು ಅಂಶಗಳು ಭಾರತದಲ್ಲಿ ಭ್ರಷ್ಟಾಚಾರ ನಿಯಂತ್ರಣ ಮತ್ತು ಪಾರದರ್ಶಕ ಆಡಳಿತಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂದಿದ್ದಾರೆ. 
ಇದೇ ವೇಳೆ ಭಾರತೀಯ ಐಟಿಯನ್ನು ಕೊಂಡಾಡಿರುವ ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊಡ್ಡ ಹೆಸರಿದೆ. ನಮ್ಮ ಅನೇಕ ಐಟಿ ಕಂಪನಿಗಳು ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿವೆ. ಸುಲಲಿತ ಆಡಳಿತ ಮತ್ತು ದಕ್ಷ ಸೇವೆಯನ್ನು ಡಿಜಿಟಲ್ ತಂತ್ರಜ್ಞಾನ ಸುಲಭ ಸಾಧ್ಯಗೊಳಿಸಿದೆ. ಡಿಜಿಟಲ್ ಕ್ಷೇತರವು ಇಂದು ಶಿಕ್ಷಣದಿಂದ ಆರೋಗ್ಯದವರೆಗಿನ ಎಲ್ಲಾ ರಂಗಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಹೇಳಿದರು. 
ದಕ್ಷ ಸೇವೆ ಮತ್ತು ಆಡಳಿತದ ತಂತ್ರಜ್ಞಾನದ ಪಾತ್ರ ಅಪಾರವಾದುದು. ಇದು ನಮ್ಮ ನಡುವಿನ ಗೋಡೆಗಳನ್ನು ಕೆಡವು, ವಸುಧೈವ ಕುಟುಂಬಕಂ ಎಂಬ ತತ್ತ್ವದಡಿಯಲ್ಲಿ ನಾವೆಲ್ಲರೂ ಬದುಕುವಂತೆ ಮಾಡುತ್ತಿದೆ. ಇಡೀ ವಿಶ್ವವೂ ಒಂದೇ ಕುಟುಂಬ ಎಂಬ ಭಾವವನ್ನು ಗಟ್ಟಿಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ. 
ಭಾರತದಲ್ಲಿ ತಾಂತ್ರಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ. ನಾವು ಮೊಬೈಲ್ ಗಳನ್ನು ನಮ್ಮ ಪ್ರಗತಿಗಾಗಿ, ಸಬರಾಗುವುದಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಮೊಬೈಲ್ ನ್ನು 'ಎಂ'ಪವರ್ ಎಂಬು ಕರೆದರೆ ಅದರಿಂದಲೇ ನಾವು ಎಂಪವರ್ (ಸಬಲ)ರಾಗುತ್ತಿದ್ದೇವೆಂದು ಮಾರ್ಮಿಕವಾಗಿ ನುಡಿದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com