ನಾವು ಅಧಿಕಾರಕ್ಕೆ ಬಂದರೆ ಗುಜರಾತಿನಲ್ಲಿ ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಸ್ಥಾಪನೆ: ರಾಹುಲ್ ಗಾಂಧಿ

ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರಿಕೆ ಸಂಬಂಧ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ ಉಪಾಂಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಪೋರಬಂದರ್: ಗುಜರಾತಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀನುಗಾರಿಕೆ ಸಂಬಂಧ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವುದಾಗಿ ಕಾಂಗ್ರೆಸ್ ಉಪಾಂಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಪೋರಬಂದರ್ ನಲ್ಲಿ ಮೀನುಗಾರರ ಸಮಾವೇಶದಲ್ಲಿ ಮಾತನಾಡಿದ ರಾಹುಲ್ "ಗುಜರಾತಿನಲ್ಲಿ ಮೀನುಗಾರಿಕೆಗಾಗಿ ಪ್ರತ್ಯೇಕ ಸಚಿವಾಲಯ ಇರಬೇಕು, ಕಾಂಗ್ರೆಸ್ ಗುಜರಾತಿನಲ್ಲಿ ಅಧಿಕಾರಕ್ಕೆ ಬಂದರೆ ನಾವು ಅದನ್ನು ಮಾಡಲಿದ್ದೇವೆ." ಎಂದರು. ಜತೆಗೆ ಅವರು ಮೀನುಗಾರರಿಗೆ ನಾವು ಎಲ್ಲಾ ವಿಧದಲ್ಲಿಯೂ ಸಹಾಯ ಒದಗಿಸುವುದಾಗಿ ಭರವಸೆ ನೀಡಿದರು.
"ಕಪ್ಪು ಹಣವನ್ನು ಬಿಳಿಯಾಗಿಸಲು ನರೇಂದ್ರ ಮೋದಿ ನೋಟ್ ಬ್ಯಾನ್ ಅನ್ನು ಅಸ್ತ್ರವಾಗಿಸಿಕೊಂಡರು". ಎಂದ ರಾಹುಲ್ "ಗುಜರಾತಿನಲ್ಲಿ ಬೆರಳೇಣಿಕೆಯಷ್ಟು ಬೃಹತ್ ಕೈಗಾರಿಕೋದ್ಯಮಿಗಳಿರಬಹುದು ಆದರೆ ಲಕ್ಷ ಸಂಖ್ಯೆಯಲ್ಲಿ ಕಾರ್ಮಿಕರು, ರೈತರೂ ಇದ್ದಾರೆ, ಕಳೆದ ಕೆಲವು ವರ್ಷಗಳಲ್ಲಿ, ಗುಜರಾತಿನಲ್ಲಿ ಕೇವಲ ಐದು ರಿಂದ ಹತ್ತು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ, ಆ ಕೈಗಾರಿಕೋದ್ಯಮಿಗಳು ಪ್ರಧಾನಿ ಮೋದಿ ಪರ ಪ್ರಚಾರಕ್ಕಾಗಿ ಕೊಡುಗೆ ನೀಡಿದ್ದಾರೆ" ಎಂದು ಹೇಳಿದರು.
"ಆದರೆ ಗುಜರಾತ್ ಐದು ಅಥವಾ ಹತ್ತು ಉದ್ಯಮಿಗಳಿಗೆ ಸೇರಿದ್ದಲ್ಲ, ಇದು ರೈತರಿಗೆ ಮತ್ತು ಮೀನುಗಾರರಿಗೆ ಸೇರಿದೆ"  ಎಂದ ರಾಹುಲ್ ಮೋದಿ ಅವರ ಮನ್ ಕಿ ಬಾತ್ ಬಗೆಗೆ ಹೇಳುತ್ "ಕಾಂಗ್ರೆಸ್ ಮತ್ತು ನಾನು ನಮ್ಮ 'ಮನ್ ಕಿ ಬಾತ್' ಹೇಳಲು ಬಯಸುವುದಿಲ್ಲ. ಬದಲಾಗಿ ನಿಮ್ಮ (ಜನರ)'ಮಾನ್ ಕಿ ಬಾತ್' ಅನ್ನು ಕೇಳಲು ಬಯಸುತ್ತೇವೆ" ಎಂದರು.
"ಮೋದಿ ಟಾಟಾ ನ್ಯಾನೋ ಕಾರ್ಖಾನೆಗಾಗಿ 33 ಸಾವಿರ ಕೋಟಿ ರೂ. ನೀಡಿದ್ದಾರೆ. ಆದರೆ ನಾವು ನರೇಗಾ ಯೋಜನೆಗೆ 33  ಸಾವಿರ ಕೋಟಿ ನೀಡೀದ್ದೆವು. ನೀವು ಟಾಟಾ ನ್ಯಾನೋ ಗಾಗಿ ಭೂಮಿ, ನೀರು, ಮೂಲಭೂತ ಸೌಕರ್ಯಗಳನ್ನು ಕಳೆದುಕೊಂಡಿರಿ. ಆದರೆ ಇಂದು ನ್ಯಾನೋ ರಸ್ತೆಯಲ್ಲೆಲ್ಲೂ ಕಾಣುತ್ತಿಲ್ಲ! ಮೋದಿ ಬಳಿ ಯಾವುದೇ ಉದ್ಯಮಿ ಹಣ ಕೇಳಿದರೆ ಅವರಿಗೆ 33 ಸಾವಿರ ಕೋಟಿ ನೀಡುತ್ತಾರೆ. ಅದೇ ಯಾವ ಮೀನುಗಾರರು ಹೋಗಿ ಅವರ ಅಭಿವೃದ್ಧಿಗೆ ಹಣ ಕೇಳಿದಲ್ಲಿ ಅವರಿಗೆ 300 ಕೋಟಿಯನ್ನು ನೀದಲೂ ಅವರ ಬಳಿ ಇರುವುದಿಲ್ಲ." ರಾಹುಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com