ಮುಜಾಫರನಗರ: ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ಮುಖಂಡ ಚೌಧರಿ ಅಖ್ತರ್ ಹಸನ್ ವಿಧಿವಶರಾಗಿದ್ದಾರೆ.
82ರ ಹರೆಯದ ಚೌಧರಿ ಅಖ್ತರ್ ಹಸನ್ ಅವರು ನವದೆಹಲಿಯಲ್ಲಿರುವ ರಾಮ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ಕುಟುಂಬವರ್ಗ ತಿಳಿಸಿದೆ.
1984ರಲ್ಲಿ ಮುಜಾಫರನಗರದ ಖೈರನ್ ಕ್ಷೇತ್ರದಿಂದ ಚೌಧರಿ ಅಖ್ತರ್ ಹಸನ್ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ ಅವರ ಪುತ್ರ ಚೌಧರಿ ಮುನಾವ್ವರ್ ಹಸನ್ 1996ರಲ್ಲಿ ಅದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.