ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಕ್ಕೆ ಜಾಗತಿಕ ಮಟ್ಟದಲ್ಲೆಲ್ಲೂ ಜಾಗವಿರಲ್ಲ: ಪಾಕ್ ವಿರುದ್ಧ ಗುಡುಗಿದ ಜೇಟ್ಲಿ

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್'ನನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನದ ವಿರುದ್ಧ ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ...
ಕೇಂದ್ರ ಸಚಿವ ಅರುಣ್ ಜೇಟ್ಲಿ
ಕೇಂದ್ರ ಸಚಿವ ಅರುಣ್ ಜೇಟ್ಲಿ
ಸೂರತ್: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್'ನನ್ನು ಬಿಡುಗಡೆ ಮಾಡಿರುವ ಪಾಕಿಸ್ತಾನದ ವಿರುದ್ಧ ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್: ಛಾಯ್ ಕೆ ಸಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಸೂರತ್ ಭೇಟಿ ನೀಡಿರುವ ಜೇಟ್ಲಿಯವರು, ಹಫೀಜ್ ಸಯೀದ್ ಬಿಡುಗಡೆ ಮಾಡಿರುವ ಪಾಕಿಸ್ತಾನದ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. 
ಭಯೋತ್ಪಾದನೆಯ ಬೆಳವಣಿಗೆಗೆ ಬೆಂಬಲ ನೀಡುವ ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಯಾವುದೇ ರೀತಿಯ ಜಾಗವಿರುವುದಿಲ್ಲ ಎಂದು ಹೇಳಿದ್ದಾರೆ. 
26/11 ಮುಂಬೈ ದಾಳಿಗೆ 9 ವರ್ಷವಾಗಲು 2 ದಿನಗಳು ಬಾಕಿಯಿರುವಾಗಲೇ ಪಾಕಿಸ್ತಾನ ಸರ್ಕಾರ ಹಫೀಜ್ ನನ್ನು ಬಿಡುಗಡೆಗೊಳಿಸಿದೆ. ಇಂತಹ ಪ್ರಕರಣಗಳಲ್ಲಿ ಭಯೋತ್ಪಾದನೆ ಬೆಂಬಲ ವ್ಯಕ್ತಪಡಿಸುವ ದೇಶದ ವಿರುದ್ಧ ಇತರೆ ದೇಶಗಳು ವಿರೋಧ ವ್ಯಕ್ತಪಡಿಸುತ್ತವೆ. ಭಯೋತ್ಪಾದನೆ ಬೆನ್ನಲುಬಾಗಿ ನಿಂತಿಹರುವ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಯಾವುದೇ ಸ್ಥಾನವನ್ನು ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಾಗಿತ್ತು. ಸಾವಿರಾರು ಜನರು ಕಲ್ಲುತೂರಾಟ ನಡೆಸಿದ್ದರು, ಉಗ್ರ ಚಟುವಟಿಕೆಗಳು ಹೆಚ್ಚಾಗ ತೊಡಗಿದದವು, ಹುರಿಯತ್ ನಾಯಕರು ಬಂದ್ ಗಳಿಗೆ ಕರೆ ನೀಡಿದ್ದರು. ಆದರೆ, ನೋಟು ನಿಷೇಧದ ಬಳಿಕ ಎಲ್ಲನೂ ನಿಯಂತ್ರಣಕ್ಕೆ ಬಂದಿದೆ. ಕಲ್ಲು ತೂರಾಟಗಳು ಕಡಿಮೆಯಾಗಿದೆ. ನೋಟಿ ನಿಷೇಧ ಹಿಂಸಾಚಾರವನ್ನು ಹತ್ತಿಕ್ಕಿದೆ.
ಕಳೆದ 8 ತಿಂಗಳ ಪರಿಸ್ಥಿತಿಯನ್ನು ಗಮನಿಸಿದರೆ, ಹೆಚ್ಚು ಕಾಲ ತಾವು ಉಳಿಯಲು ಸಾಧ್ಯವಿಲ್ಲ ಎಂಬುದುನ್ನು ಯಾವುದೇ ಉಗ್ರ ಸಂಘಟನೆಯ ತಿಳಿದುಕೊಳ್ಳಬಹುದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com