ಮನುಷ್ಯನ ಕಷ್ಟ ಅರ್ಥ ಮಾಡಿಕೊಳ್ಳದ ಯಾವುದೇ ಸರ್ಕಾರ ಬಿದ್ದು ಹೋಗುತ್ತದೆ: ಕಮಲ್ ಹಾಸನ್

ತಮಿಳುನಾಡು ಸರ್ಕಾರದ ವಿರುದ್ಧ ಹರಿಹಾಯ್ದ ಹಿರಿಯ ನಟ ಕಮಲ್ ಹಾಸನ್, ಯಾವುದೇ ಪಕ್ಷಗಳು ....
ಕಮಲ್ ಹಾಸನ್
ಕಮಲ್ ಹಾಸನ್
ಚೆನ್ನೈ: ತಮಿಳುನಾಡು ಸರ್ಕಾರದ ವಿರುದ್ಧ ಹರಿಹಾಯ್ದ ಹಿರಿಯ ನಟ ಕಮಲ್ ಹಾಸನ್, ಯಾವುದೇ ಪಕ್ಷಗಳು ಜನರ ನೋವು, ಸಮಸ್ಯೆಗಳಿಗೆ ಸ್ಪಂದಿಸದೆ ತನ್ನ ಅಧಿಕಾರ ಮತ್ತು ಖ್ಯಾತಿ ಕಡೆಗೆ ಗಮನ ಹರಿಸುತ್ತಿದ್ದರೆ ಅದು ಸೋಲುವುದು ಖಚಿತ ಎಂದು ಟೀಕಿಸಿದ್ದಾರೆ.
ಜನರ ಜೀವಕ್ಕೆ ಬೆಲೆ ನೀಡದ ತಮಿಳುನಾಡು ಸರ್ಕಾರ ದೀರ್ಘಕಾಲದವರೆಗೆ ಆಳ್ವಿಕೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ಕೊಯಂಬತ್ತೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರೊಬ್ಬರು ರಸ್ತೆಯ ಪಕ್ಕ ಮರದ ಭಾಗವೊಂದಕ್ಕೆ ತಾಗಿ ಇತ್ತೀಚೆಗೆ ಮೃತಪಟ್ಟ ಘಟನೆಯನ್ನು ಉಲ್ಲೇಖಿಸಿ ಅವರು ಟ್ವೀಟ್ ಮಾಡಿದ್ದಾರೆ.
ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕಮಾನಿಗೆ ಮರದ ಭಾಗವನ್ನು ಬಳಸಿ ಕಮಾನಿನ ರೀತಿ ಅಲಂಕರಿಸಲಾಗಿತ್ತು.ಇದಕ್ಕೆ ತಾಗಿ ಎಂಜಿನಿಯರ್ ಮೃತಪಟ್ಟಿದ್ದರು.
ಈ ಮರದ ರಚನೆಯನ್ನು ಕಟ್ಟಲು ಎಐಎಡಿಎಂಕೆ ಪಕ್ಷ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ ಎಂದು ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com