ಚರ್ಮ ಸುಲಿಯುತ್ತೇವೆ: ಪ್ರಧಾನಿ ಮೋದಿ ವಿರುದ್ಧ ತೇಜ್ ಪ್ರತಾಪ್ ವಾಗ್ದಾಳಿ

ಲಾಲು ಪ್ರಸಾದ್ ಯಾದವ್ ಅವರ ಭದ್ರತೆಯನ್ನು ಝೆಡ್ ಗೆ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ತೇಜ್ ಪ್ರತಾಪ್ ಪ್ರಧಾನಿ ನರೇಂದ್ರ ಮೋದಿ ಅವರ ಚುರ್ಮ ಸುಲಿಯುತ್ತೇವೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಟ್ನಾ: ಲಾಲು ಪ್ರಸಾದ್ ಯಾದವ್ ಅವರ ಭದ್ರತೆಯನ್ನು ಝೆಡ್ ಗೆ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ತೇಜ್ ಪ್ರತಾಪ್  ಪ್ರಧಾನಿ ನರೇಂದ್ರ ಮೋದಿ ಅವರ ಚುರ್ಮ ಸುಲಿಯುತ್ತೇವೆ ಎಂದು ಹೇಳಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಭದ್ರತೆಯನ್ನು ಝೆಡ್ ಪ್ಲಸ್ ಗೆ ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಹಾರದಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತೇಜ್ ಪ್ರತಾಪ್ ಅವರು, ಜೆಡ್ ಪ್ಲಸ್  ಭದ್ರತೆಯನ್ನು ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಸರಿಯಲ್ಲ. ಅವರಿಗೇನಾದರೂ ಹೆಚ್ಚುಕಮ್ಮಿಯಾದರೆ ಮೋದಿ ಚರ್ಮ ಸುಲಿಯುತ್ತೇವೆ ಎಂದು ಕಿಡಿಕಾರಿದ್ದಾರೆ. 
ತೇಜ್ ಪ್ರತಾಪ್ ಗೆ ಪಾಠ ಕಲಿಸುತ್ತೇವೆ: ಸುಶೀಲ್ ಮೋದಿ
ಇನ್ನು ತೇಜ್ ಪ್ರತಾಪ್ ಅವರ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಬಿಹಾರ ಬಿಜೆಪಿ ಘಟಕ ತೇಜ್ ಪ್ರತಾಪ್ ವಿರುದ್ಧ ಕೆಂಡಾಮಂಡಲವಾಗಿದ್ದು, ಅವರಿಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ  ಮಾತನಾಡಿರುವ ಬಿಹಾರ ಬಿಜೆಪಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಅವರು, ದೇಶದ ಪ್ರಧಾನಿಗಳ ವಿರುದ್ಧ ಇಂತಹ ಕೀಳುಮಟ್ಟದ ಭಾಷಾ ಪ್ರಯೋಗ ಸರಿಯಲ್ಲ. ಅವರು ಏನು ಬೇಕಾದರೂ  ಮಾತನಾಡಬಹುದು. ಆದರೆ ಅವರ ಬಳಕೆ ಮಾಡುವ ಭಾಷೆ ಮೇಲೆ ನಿಯಂತ್ರಣವಿರಬೇಕು. ದೇಶದ ಪ್ರಜೆಗಳು ಖಂಡಿತಾ ಅವರಿಗೆ ಪಾಠ ಕಲಿಸುತ್ತಾರೆ ಎಂದು ಸುಶೀಲ್ ಮೋದಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಿಹಾರ ಮಾಜಿ ಮುಖ್ಯಮಂಟ್ರಿ, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ನೀಡಲಾಗಿದ್ದ ಝೆಡ್ ಪ್ಲಸ್ ವಿಐಪಿ ಭದ್ರತೆಯನ್ನು ಹಿಂಪಡೆದಿತ್ತು. ಝೆಡ್ ಪ್ಲಸ್ ಭದ್ರತೆ ಪಡೆದಿದ್ದವರಿಗಿದ್ದ ಬೆದರಿಕೆಯ  ವಿಷಯವನ್ನು ಪುನರ್ ಪರಿಶೀಲನೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.  ಝೆಡ್ ಪ್ಲಸ್ ಬದಲಾಗಿ ಲಾಲು ಪ್ರಸಾದ್ ಯಾದವ್ ಅವರಿಗೆ ಝೆಡ್ ಶ್ರೇಣಿಯ ಭದ್ರತೆ ನೀಡಲಾಗುತ್ತದೆ ಹಾಗೂ ನ್ಯಾಷನಲ್  ಸೆಕ್ಯುರಿಟಿ ಗಾರ್ಡ್ ಬ್ಲಾಕ್ ಕ್ಯಾಟ್ ಕಮಾಂಡೋಗಳ ಬದಲಿಗೆ ಸಿಆರ್ ಪಿಫ್ ಸಿಬ್ಬಂದಿಗಳು ರಕ್ಷಣೆಗೆ ಇರಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com