ಉತ್ತರ ಪ್ರದೇಶ: ನಗರ ಪಾಲಿಕೆ ಚುನಾವಣೆಯ ವೇಳೆ ನಕಲಿ ಮತದಾನ, ಕೆಲವೆಡೆ ಹಿಂಸಾಚಾರ

ಉತ್ತರ ಪ್ರದೇಶದಲ್ಲಿ ಇಂದು ನಡೆದ ಮೂರನೇ ಹಾಗೂ ಅಂತಿಮ ಹಂತದ ನಗರ ಪಾಲಿಕೆ ಚುನಾವಣೆಯಲ್ಲಿ ಹಲವು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದ ವರದಿಗಳು ಬಂದಿದ್ದು ..........
ಉತ್ತರ ಪ್ರದೇಶ: ನಗರ ಪಾಲಿಕೆ ಚುನಾವಣೆಯ ವೇಳೆ ನಕಲಿ ಮತದಾನ, ಕೆಲವೆಡೆ ಹಿಂಸಾಚಾರ
ಉತ್ತರ ಪ್ರದೇಶ: ನಗರ ಪಾಲಿಕೆ ಚುನಾವಣೆಯ ವೇಳೆ ನಕಲಿ ಮತದಾನ, ಕೆಲವೆಡೆ ಹಿಂಸಾಚಾರ
ಲಖ್ನೋ: ಉತ್ತರ ಪ್ರದೇಶದಲ್ಲಿ ಇಂದು ನಡೆದ ಮೂರನೇ ಹಾಗೂ ಅಂತಿಮ ಹಂತದ ನಗರ ಪಾಲಿಕೆ ಚುನಾವಣೆಯಲ್ಲಿ ಹಲವು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದ ವರದಿಗಳು ಬಂದಿದ್ದು ಇನ್ನು ಕೆಲವೆಡೆಹಿಂಸಾತ್ಮಕ ಘಟನೆಗಳು ಸಂಭವಿಸಿದೆ.
ಮೊರಾದಾಬಾದ್ ನ ಬೂತ್ ಗಳಲ್ಲಿ ಹಿಂಸಾಚಾರ ನಡೆದ ವರದಿಯಾಗಿದ್ದುನರ ಠಾಕೂರ್ ವಾಡಾ ಮತಗಟ್ಟೆಯಲ್ಲಿ  ನಕಲಿ ಮತದಾನ ನಡೆದಿದೆ. ಬುರ್ಖಾ ಧರಿಸಿದ್ದ ಮೂವರು ಮಹಿಳೆಯರನ್ನು ಈ ಸಂಬಂಧ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸಹರಾಂಪುರ ದ ಹಲವು ಮತಗಟ್ಟೆಗಳಲ್ಲಿ ಜನರು ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮತಗಟ್ಟೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಈ ಸಂದರ್ಭ ಜನರನ್ನು ಚದುರಿಸಲು ಪೋಲೀಸರು ಹರಸಾಹಸ ಪಡಬೇಕಾಯಿತು.
ಉತ್ತರ ಪ್ರದೇಶದ 26 ಜಿಲ್ಲೆಗಳಲ್ಲಿ ಐದು ಪುರಸಭಾ ನಿಗಮಗಳು, 76 ನಗರ ಪಾಲಿಕೆಗಳು ಮತ್ತು 152 ನಗರ ಪಂಚಾಯತ್ ಗಳಿಗೆ ಮತದಾನ ನಡೆಯಿತು. ಇದರೊಡನೆ ಐದು ಪುರಸಭೆಗಳಿಗೆ ನೂತನ ಮೇಯರ್ ಆಯ್ಕೆಗಾಗಿ ಮತದಾನ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com