ಅರುಣಾಚಲ ಪ್ರದೇಶ: 88 ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಶಿಕ್ಷೆ ನೀಡಿದ ಶಿಕ್ಷಕರು!

ಶಾಲೆಯ ಮುಖ್ಯ ಶಿಕ್ಷಕರ ಕುರಿತು ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾರೆಂಬ ಕಾರಣಕ್ಕೆ 88 ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಶಿಕ್ಷಕರು ಶಿಕ್ಷೆ ನೀಡಿರುವ ಘಟನೆಯೊಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಅರುಣಾಚಲ ಪ್ರದೇಶ: ಶಾಲೆಯ ಮುಖ್ಯ ಶಿಕ್ಷಕರ ಕುರಿತು ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾರೆಂಬ ಕಾರಣಕ್ಕೆ 88 ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಶಿಕ್ಷಕರು ಶಿಕ್ಷೆ ನೀಡಿರುವ ಘಟನೆಯೊಂದು ಅರುಣಾಚಲ ಪ್ರದೇಶದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ನಡೆದಿದೆ. 
ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ 6 ಮತ್ತು 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ 88 ವಿದ್ಯಾರ್ಥಿನಿಯರನ್ನು ನ.23 ರಂದು ವಿವಸ್ತ್ರಗೊಳಿಸಿ ಶಿಕ್ಷೆ ನೀಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಶಾಲಾ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾರ್ಥಿನಿಯೊಬ್ಬಳಿಗೆ ಸಂಬಂಧಿಸಿದಂತೆ ಅಶ್ಲೀಲ ಪದ ಬಳಸಿ ನಿಂದನೆ ಮಾಡಿರುವ ಕಾಗದದ ಚೂರೊಂದು ಮೂವರು ಶಿಕ್ಷಕರಿಗೆ ದೊರೆತಿದೆ. ಬಳಿಕ ಉಳಿದ ವಿದ್ಯಾರ್ಥಿನಿಯರ ಎದುರು 88 ವಿದ್ಯಾರ್ಥಿನಿಯರಿಗೆ ಬಟ್ಟೆ ತೆಗೆಯುವಂತೆ ತಿಳಿಸಿ ಶಿಕ್ಷಕರು ಶಿಕ್ಷೆ ನೀಡಿದ್ದಾರೆಂದು ತಿಳಿದುಬಂದಿದೆ. ಘಟನೆ ನಡೆದು ನಾಲ್ಕು ದಿನಗಳ ಬಳಿಕ ಕೆಲ ವಿದ್ಯಾರ್ಥಿನಿಯರು ವಿದ್ಯಾರ್ಥಿ ಸಂಘಟನೆಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 
ದೂರಿನಲ್ಲಿ ಇಬ್ಬರು ಸಹ ಶಿಕ್ಷಕರು ಹಾಗೂ ಕಿರಿಯ ಶಿಕ್ಷಕರು 88 ವಿದ್ಯಾರ್ಥಿನಿಯರು ಬಲವಂತದಿಂದ ಬಟ್ಟೆ ಬಿಚ್ಚುವಂತೆ ಶಿಕ್ಷೆ ನೀಡಿದರು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com