ಅಧ್ಯಕ್ಷರ ಆಯ್ಕೆಯಷ್ಟೇ.. ಚುನಾವಣೆಯಲ್ಲ: ರಾಹುಲ್ ಆಯ್ಕೆಗೆ ಕಾಂಗ್ರೆಸ್ ಮುಖಂಡನ ವಿರೋಧ!

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲ..ಕೇವಲ ಆಯ್ಕೆಯಷ್ಟೇ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ವಿರೋಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲ.. ಕೇವಲ ಆಯ್ಕೆಯಷ್ಟೇ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ವಿರೋಧಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಕಾಂಗ್ರೆಸ್ ಮುಖಂಡ ಶೆಹಜಾದ್ ಪೂನಾವಾಲ ಅವರು ವಿರೋಧ ವ್ಯಕ್ತಪಡಿಸಿದ್ದು, ಎಐಎಸಿಸಿಯಲ್ಲಿ ನಡೆಯುತ್ತಿರುವ ಅಧ್ಯರಾಗಿ ರಾಹುಲ್ ಗಾಂಧಿ ಅವರ ಆಯ್ಕೆಯಷ್ಟೇ..ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲ  ಎಂದು ಕಿಡಿಕಾರಿದ್ದಾರೆ. ಅಂತೆಯೇ ಎಐಎಸಿಸಿ ಅಧ್ಯಕ್ಷ ಚುನಾವಣೆ ಸಂಪೂರ್ಣವಾಗಿ ರಾಹುಲ್ ಗಾಂಧಿ ಅವರನ್ನೇ ಆಧ್ಯರಾಗಿ ಆಯ್ಕೆ ಮಾಡಬೇಕು ಎನ್ನುವಂತೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇಡೀ ಚುನಾವಣಾ ಪ್ರಕ್ರಿಯೆ  ರಾಹುಲ್ ಗಾಂಧಿ ಪರವಾಗಿದ್ದು, ಅವರು ಗಾಂಧಿ ಕುಟುಂಬದ ಕುಡಿ ಎಂಬುದೇ ಇದಕ್ಕೆ ಕಾರಣ ಎಂದೂ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಪೂನಾವಾಲ, ರಾಹುಲ್ ಗಾಂಧಿ ಆಯ್ಕೆ ಮತ್ತು ಏಕಪಕ್ಷೀಯ ಚುನಾವಣಾ ಪ್ರಕ್ರಿಯೆ ಕುರಿತು ಮಾತನಾಡಿದರೆ ತಮ್ಮ ಪರವಾಗಿ ಯಾರೂ ನಿಲ್ಲುತ್ತಿಲ್ಲ. ಎಲ್ಲರೂ  ಶತಾಯಗತಾಯ ರಾಹುಲ್ ಗಾಂಧಿ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಧಾಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ರಾಹುಲ್ ವಿರುದ್ಧ ಬೇರೆ ಯಾರೇ ಸ್ಪರ್ಧಿಸಿದರೂ ರಾಹುಲ್ ಅವರನ್ನೇ ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಲಾಗುತ್ತದೆ ಎಂದು ಪೂನಾವಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶೆಹಜಾದ್ ಪೂನಾವಾಲ ಹೇಳಿಕೆಗೆ ಇತರೆ ಮುಖಂಡರ ವಿರೋಧ
ಇನ್ನು ಶೆಹಜಾದ್ ಪೂನಾವಾಲಾ ಹೇಳಿಕೆ ಸಂಬಂಧ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಕಿಡಿಕಾರಿದ್ದು, ಶೆಹಜಾದ್ ಪೂನಾವಾಲ ಅವರು ಬೆನ್ನಿಗೆ ತೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಪೂನಾವಾಲಾ ಹೇಳಿಕೆ ನಿಜಕ್ಕೂ ಆಘಾತ  ತಂದಿದೆ. ನಾವೆಲ್ಲರೂ ಒಗ್ಗೂಡಿ ಬಿಜೆಪಿಯನ್ನು ಮಣಿಸಬೇಕಿದೆ. ಇಂತಹ ಹೊತ್ತಿನಲ್ಲಿ ರಾಹುಲ್ ರಂತಹ ಸಮರ್ಥ ನಾಯಕತ್ವದ ಅಗತ್ಯವಿದೆ. ಇಂತಹ ಹೊತ್ತಿನಲ್ಲಿ ರಾಹುಲ್ ಕುರಿತ ಶೆಹಜಾದ್ ಪೂನಾವಾಲ ಹೇಳಿಕೆ ಆಘಾತ  ತಂದಿದೆ. ಇಂದಿನಿಂದ ನನ್ನ ಮತ್ತು ಶೆಹಜಾದ್ ಪೂನಾವಾಲ ಸಂಪರ್ಕ ಕಡಿತಗೊಳಿಸುತ್ತೇನೆ ಎಂದು ಶೆಹಜಾದ್ ಸಹೋದರ ತೆಹ್ಸೀನ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com