ಭಾವನಗರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, "ನನ್ನ ಅಜ್ಜಿ ಹಾಗೂ ಕುಟುಂಬದ ಎಲ್ಲರೂ ಶಿವಭಕ್ತರು. ಆದರೆ ಅದನ್ನು ನಾವು ಎಲ್ಲೂ ಹೇಳಿಕೊಳ್ಳುವುದಿಲ್ಲ. ಏಕೆಂದರೆ ಧರ್ಮ ಎನ್ನುವುದು ವೈಯಕ್ತಿಕ ವಿಚಾರ. ನಮ್ಮ ನಂಬಿಕೆ ವೈಯಕ್ತಿಕ ವಿಚಾರ. ಈ ಬಗ್ಗೆ ಯಾರಿಗೂ ಪ್ರಮಾಣಪತ್ರ ನೀಡಬೇಕಾದ್ದಿಲ್ಲ. ನಾವು ಧರ್ಮದ ದಲ್ಲಾಳಿಗಳಲ್ಲ. ಅದನ್ನು ರಾಜಕೀಯವಾಗಿ ನಾವು ಬಳಸುವುದಿಲ್ಲ" ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ.