ಕಾಸರಗೋಡು: ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಮೂವರು ಶಂಕಿತ ಸಿಪಿಐ(ಎಂ) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ನಿನ್ನೆ ರಾತ್ರಿ ಈ ಹಲ್ಲೆ ನಡೆದಿದ್ದು ಇಂದು ಕೇಸರಿ ಪಕ್ಷವು 'ಜನ ರಕ್ಷಾ ಯಾತ್ರಾ' ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಿದೆ.
ಬಿಜೆಪಿ ಕಾರ್ಯಕರ್ತರು 15 ದಿನದ ಜಾಥಾಗಾಗಿ ರಾಷ್ಟ್ರೀಯ ಹೆದ್ದಾರಿ-66ನ್ನು ಅಲಂಕರಿಸುತ್ತಿದ್ದಾಗ ರಾತ್ರಿ 9:30 ರ ವೇಳೆಗೆ ಈ ಘಟನೆ ನಡೆದಿದೆ. ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಜಾಥಾವನ್ನು ಇದನ್ನು ಪ್ರಾರಂಭಿಸಲಿದ್ದಾರೆ.
ಗಾಯಗೊಂಡ ಮೂವರು ಕಾರ್ಯಕರ್ತರಿಗೆ ನೀಲೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀದಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನೇತೃತ್ವದಲ್ಲಿ ನೀಲೇಶ್ವರ ಮಾರುಕಟ್ಟೆ, ರಸ್ತೆಗಳ ಬದಿ ಅಲಂಕರಿಸುತ್ತಿದ್ದಾಗ ಸುಮಾರು 20 ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಫ್ಲೆಕ್ಸ್ ಬೋರ್ಡ್ ಗಳು, ಟ್ಯೂಬ್ ಲೈಟುಗಳು ಮತ್ತು ದ್ವಿಚಕ್ರ ವಾಹನಗಳು ಘಟನೆಯಲ್ಲಿ ಹಾನಿಗೊಂಡಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬಿಜೆಪಿಯ ಪ್ರಭಾವ ಹೆಚ್ಚುತ್ತಿದ್ದು ಇದನ್ನು ಸಹಿಸದ ಸಿಪಿಐ (ಎಂ) ಕಾರ್ಯಕರ್ತರು ಈ ದಾಳಿಯಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪಿಸಿದರು.