ಭದ್ರತೆ ಹೊರತಾಗಿಯೂ ಉಗ್ರರು ಒಳನುಸುಳಿದ್ದು ಹೇಗೆ ಎಂಬುದನ್ನು ಆರ್ಥೈಸುವುದು ಕಷ್ಟ: ರಕ್ಷಣಾ ತಜ್ಞರು
ಶ್ರೀನಗರ ವಿಮಾನ ನಿಲ್ದಾಣ ಅತ್ಯಂತ ಹೆಚ್ಚಿನ ಭದ್ರತೆಯುಳ್ಳ ಪ್ರದೇಶವಾಗಿದ್ದು, ಹೆಚ್ಚಿನ ಭದ್ರತೆ ಹೊರತಾಗಿಯೂ ಉಗ್ರರು ಒಳನುಸುಳಿ ಹೇಗೆ ದಾಳಿ ನಡೆಸಿದರು ಎಂಬುದನ್ನು ಅರ್ಥೈಸುವುದು ಬಹಳ ಕಷ್ಟ ಎಂದು ರಕ್ಷಣಾ ತಜ್ಞರು ಬುಧವಾರ ಹೇಳಿದ್ದಾರೆ...
ನವದೆಹಲಿ: ಶ್ರೀನಗರ ವಿಮಾನ ನಿಲ್ದಾಣ ಅತ್ಯಂತ ಹೆಚ್ಚಿನ ಭದ್ರತೆಯುಳ್ಳ ಪ್ರದೇಶವಾಗಿದ್ದು, ಹೆಚ್ಚಿನ ಭದ್ರತೆ ಹೊರತಾಗಿಯೂ ಉಗ್ರರು ಒಳನುಸುಳಿ ಹೇಗೆ ದಾಳಿ ನಡೆಸಿದರು ಎಂಬುದನ್ನು ಅರ್ಥೈಸುವುದು ಬಹಳ ಕಷ್ಟ ಎಂದು ರಕ್ಷಣಾ ತಜ್ಞರು ಬುಧವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಬಿಎಸ್ಎಪ್ ಕ್ಯಾಂಪ್ ಮೇಲೆ ದಾಳಿ ನಡೆಸಿ, ಆತ್ಮಾಹುತಿ ದಾಳಇ ನಡೆಸಲು ಮುಂದಾಗಿದ್ದ ಪಾಕಿಸ್ತಾನ ಮೂಲಕ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಯತ್ವನ್ನು ಭಾರತೀಯ ಸೇನೆ ನಿನ್ನೆ ವಿಫಲಗೊಳಿಸಿತ್ತು.
ಉಗ್ರರು ಹಾಗೂ ಸೇನಾ ಪಡೆಗಳ ನಡುವೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಬಿಎಸ್ಎಫ್ ಸಹಾಯಕ ಸಬ್ ಇನ್ಸ್'ಪೆಕ್ಟರ್ ಹುತಾತ್ಮರಾಗಿದ್ದರು. ಅಲ್ಲದೆ, ಮೂವರು ಯೋಧರಿಗೆ ಗಾಯಗಳಾಗಿತ್ತು. ಬಿಎಸ್ಎಫ್ ಹಾಗೂ ಸಿಆರ್'ಪಿಎಫ್ ಯೋಧರು ನಡೆಸಿದ್ದ ಪ್ರತಿದಾಳಿಯಲ್ಲಿ ಮೂವರು ಉಗ್ರರನ್ನು ಹತ್ಯೆಯಾಗಿದ್ದರು.
ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು, ಶ್ರೀನಗರ ಅತ್ಯಂತ ಹೆಚ್ಚಿನ ಭದ್ರತೆಯುಳ್ಳ ಪ್ರದೇಶದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಭದ್ರತೆಯ ನಡುವೆಯೂ ಉಗ್ರರು ನುಸುಳಿ ದಾಳಿ ನಡೆಸಿರುವುದರಿಂದ ಈ ಬಗ್ಗೆ ಹೆಚ್ಚಿನ ಚಿಂತನೆಗಳನ್ನು ನಡೆಸಬೇಕಿದೆ ಎಂದು ಹೇಳಿದ್ದಾರೆ.
ಉಗ್ರರ ದಾಳಿ ನಿಜಕ್ಕೂ ದುರಾದೃಷ್ಟಕರ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನಾಪಡೆಗಳು ಸೀಮಿತ ದಾಳಿ ನಡೆಸಿದ ಬಳಿಕ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ರೀತಿಯ ದಾಳಿಗಳನ್ನು ನಿರೀಕ್ಷಿಸಲಾಗಿತ್ತು. ಪಾಕಿಸ್ತಾನ ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದೆ. ದಾಳಿ ನಡೆಸಿದ್ದ ಮೂವರು ಉಗ್ರರನ್ನು ಹತ್ಯೆ ಮಾಡಿದ ಪರಿಣಾಮ ದಾಳಿಯಲ್ಲಿ ಕೇವಲ ಒಬ್ಬ ಯೋಧನನ್ನು ಅಷ್ಟೇ ನಾವು ಕಳೆದುಕೊಂಡಿದ್ದೇವೆಂದು ತಿಳಿಸಿದ್ದಾರೆ.
ಮತ್ತೊಬ್ಬ ರಕ್ಷಣಾ ತಜ್ಞ ಖ್ವಾಮರ್ ಅಘಾ ಮಾತಾನಾಡಿ, ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ಸುಧೀರ್ಘ ಕಾರ್ಯಾಚರಣೆ ನಡೆಸಿ ಎಲ್ಲಾ ಉಗ್ರರನ್ನು ಹತ್ಯೆ ಮಾಡಿ, ಕಾಶ್ಮೀರದಲ್ಲಿ ಶಾಂತಿ ನೆಲೆಯೂರುವಂತೆ ಮಾಡಿದೆ ಎಂದಿದ್ದಾರೆ.