ಆಂಧ್ರಪ್ರದೇಶ ಸ್ವಚ್ಛ ಭಾರತ ಅಭಿಯಾನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ 5 ಅಂಕಗಳು

ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ 9 ನೇ ತರಗತಿ ಹಾಗೂ ನಂತರದ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚುವರಿ 5 ಅಂಕಗಳನ್ನು ನೀಡಲು ಆಂಧ್ರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಜಯವಾಡ: ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ 9 ನೇ ತರಗತಿ ಹಾಗೂ ನಂತರದ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚುವರಿ 5 ಅಂಕಗಳನ್ನು ನೀಡಲು ಆಂಧ್ರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ. 
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ 2019 ರ ಮಾರ್ಚ್ ವೇಳೆಗೆ ಆಂಧ್ರಪ್ರದೇಶ ಸರ್ಕಾರ ರಾಜ್ಯವನ್ನು ಶೇ.100 ರಷ್ಟು ಬಯಲು ಶೌಚ ಮುಕ್ತವನ್ನಾಗಿಸುವ ಗುರಿ ಹೊಂದಿದೆ. ಇದಕ್ಕಾಗಿ 21 ಲಕ್ಷ ಶೌಚಾಲಯ ಮಾಡಬೇಕಿದೆ. ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿ ಸಚಿವ ನಾರಾ ಲೋಕೇಶ್ ಸ್ವಚ್ಛ ಭಾರತ ಅಭಿಯಾನಕ್ಕೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವ ಪ್ರಸ್ತಾವನೆ ನೀಡಿದ್ದಾರೆ. 
ಶೌಚಾಲಯಗಳಿಲ್ಲದ ಮನೆಗಳನ್ನು ಗುರುತಿಸಲು ವಿದ್ಯಾರ್ಥಿಗಳು ಸರ್ಕಾರಕ್ಕೆ ಸಹಾಯ ಮಾಡಲಿ, ಒಂದು ವೇಳೆ ತಮ್ಮ ಮನೆಗಳಲ್ಲೂ ಶೌಚಾಲಯಗಳಿಲ್ಲದೇ ಇದ್ದರೆ ಶೌಚಾಲಯ ನಿರ್ಮಾಣ ಮಾಡಲು ಪೋಷಕರನ್ನು ಉತ್ತೇಜಿಸಲಿ ಎಂದು ಸ್ವಚ್ಛ ಆಂಧ್ರ ಕಾರ್ಪೊರೇಷನ್ ನ ನಿರ್ದೇಶಕ ಮುರಳೀಧರ್ ರೆಡ್ಡಿ ಹೇಳಿದ್ದಾರೆ. ಶೌಚಾಲಯದ ವಿನ್ಯಾಸಕ್ಕಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಲಹೆ, ಸಹಾಯವನ್ನೂ ಪಡೆದುಕೊಳ್ಳುವುದಾಗಿ ಮುರಳೀಧರ್ ರೆಡ್ಡಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com