ಈ ಸ್ವತಃ ಸುಷ್ಮಾ ಸ್ವರಾಜ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಪುಟ್ಟ ಮಗಳ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನವಿ ಮಾಡಿದ್ದ ಪಾಕಿಸ್ತಾನದ ಮಹಿಳೆಯೊಬ್ಬರಿಗೆ ಸುಷ್ಮಾ ಸ್ವರಾಜ್ ನೆರವಾಗಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮಲ್ಲಿ ಸಹಾಯ ಯಾಚಿಸಿದ ಇಬ್ಬರು ಪಾಕಿಸ್ತಾನಿ ನಾಗರಿಕರಿಗೆ ಆಪತ್ಬಾಂಧವರಾಗಿದ್ದಾರೆ. ಪಾಕ್ ಪ್ರಜೆಗಳು ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಅದಕ್ಕೆ ಸ್ಪಂದಿಸಿರುವ ಸುಷ್ಮಾ ಸ್ವರಾಜ್ ಅವರು ವೈದ್ಯಕೀಯ ಕಾರಣಗಳಿಗಾಗಿ ವೀಸಾ ನೀಡುವುದಾಗಿ ಭರವಸೆ ನೀಡಿದ್ದಾರೆ.
‘‘ನಿಮ್ಮ ಮೂರು ವರ್ಷದ ಮಗಳ ತೆರೆದ ಹೃದಯ ಶಸ್ತ್ರಚಿಕಿತ್ಸೆಗಾಗಿ ವೀಸಾ ನೀಡುತ್ತೇವೆ. ಆಕೆ ಶೀಘ್ರ ಗುಣಮುಖಳಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ’’ ಎಂದು ಲಾಹೋರ್ ನಿವಾಸಿ ಉಜೈರ್ ಹುಮಾಯುನ್ ಅವರಿಗೆ ಸುಷ್ಮಾ ಟ್ವೀಟ್ ಮಾಡಿದ್ದಾರೆ. ಹೃದ್ರೋಗಿಯಾಗಿರುವ ತನ್ನ ಪುತ್ರಿಯ ಚಿಕಿತ್ಸೆಗೆ ಭಾರತಕ್ಕೆ ಬರಲು ಹುಮಾಯುನ್ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವು ಕೋರಿದ್ದರು.