ನವದೆಹಲಿ: ಉತ್ತರ ಪ್ರದೇಶದ ಗಜಿಯಾಬಾದ್ ಜಿಲ್ಲೆಯ ಹಿಂಡನ್ ವಾಯುಪಡೆ ನೆಲೆಯಲ್ಲಿ ಭಾರತೀಯ ವಾಯುಪಡೆ 85ನೇ ವರ್ಷಾಚರಣೆಯನ್ನು ಆಚರಿಸುತ್ತಿದೆ.
ವಾಯುಪಡೆ ನೆಲೆಯಲ್ಲಿ ಅತ್ಯಂತ ಆಕರ್ಷಣೀಯವಾದ ವಾಯು ಕವಾಯತು ಮತ್ತು ಪರೇಡ್ ನಡೆಯುತ್ತಿದೆ.
ಇಂದು ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶ ರಕ್ಷಣೆಯಲ್ಲಿ ವಾಯುಪಡೆ ಸಿಬ್ಬಂದಿಯನ್ನು ಶ್ಲಾಘಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ವಾಯುಪಡೆ ದಿನದಂದು ನಾನು ಯೋಧರ ಬದ್ಧತೆ ಮತ್ತು ಸಮರ್ಪಣೆಯನ್ನು ಕೊಂಡಾಡುತ್ತೇನೆ. ಅವರು ನಮ್ಮ ಆಕಾಶವನ್ನು ಕಾಯುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, ವಾಯುಪಡೆ ದಿನಾಚರಣೆ ಸಂದರ್ಭದಲ್ಲಿ ನಮ್ಮ ಯೋಧರು ಮತ್ತು ಅವರ ಕುಟುಂಬದವರಿಗೆ ಶುಭಾಶಯಗಳು. ಯೋಧರ ನಿರ್ಣಯ ಮತ್ತು ಪರಾಕ್ರಮಗಳಿಂದ ನಮ್ಮ ಆಕಾಶವು ಸುರಕ್ಷಿತವೆಂದು ಖಚಿತವಾಗುತ್ತದೆ ಎಂದಿದ್ದಾರೆ.
ಸೂರ್ಯಕಿರಣ ಏರೋಬಾಟಿಕ್ ತಂಡ ವಿಶ್ವದರ್ಜೆಯ ವೈಮಾನಿಕ ಪ್ರದರ್ಶನಗಳಿಂದ ನೋಡುಗರ ಮನಸೂರೆಗೊಳಿಸಿದವು.
On Air Force Day, best wishes to our courageous air warriors & their families. Their determination & prowess ensure that our skies are safe. pic.twitter.com/rK6I9JfHLJ