'ದಿ ವೈರ್' ವಿವಾದ: ಜಯ್ ಶಾ ಪರ ವಾದ ಮಂಡಿಸಲಿರುವ ಸರ್ಕಾರಿ ವಕೀಲ ತುಷಾರ್ ಮೆಹ್ತಾ!

ದಿ ವೈರ್ ಅಂತರ್ಜಾಲ ಸುದ್ದಿತಾಣದ ವಿರುದ್ದ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವ ಅಮಿತ್ ಶಾ ಪುತ್ರ ಜಯ್ ಶಾ ಪರವಾಗಿ ಕೋರ್ಟ್ ನಲ್ಲಿ ತಾವು ವಾದ ಮಂಡಿಸುವುದಾಗಿ ಕೇಂದ್ರ ಸರ್ಕಾರಿ ಪರ ವಕೀಲ ತುಷಾರ್ ಮೆಹ್ತಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದಿ ವೈರ್ ಅಂತರ್ಜಾಲ ಸುದ್ದಿತಾಣದ ವಿರುದ್ದ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವ ಅಮಿತ್ ಶಾ ಪುತ್ರ ಜಯ್ ಶಾ ಪರವಾಗಿ ಕೋರ್ಟ್ ನಲ್ಲಿ ತಾವು ವಾದ ಮಂಡಿಸುವುದಾಗಿ ಕೇಂದ್ರ ಸರ್ಕಾರಿ  ಪರ ವಕೀಲ ತುಷಾರ್ ಮೆಹ್ತಾ ಹೇಳಿದ್ದಾರೆ.
ಅಮಿತ್ ಪುತ್ರ ಜಯ್ ಶಾ ಮಾಲೀಕತ್ವದ ಸಂಸ್ಥೆ ಒಂದೇ ವರ್ಷದಲ್ಲಿ ತನ್ನ ಆದಾಯವನ್ನು 50 ಸಾವಿರದಿಂದ 80 ಕೋಟಿಗೆ ಏರಿಕೆ ಮಾಡಿಕೊಂಡಿದೆ ಎಂದು ದಿ ವೈರ್ ಅಂತರ್ಜಾಲ ಸುದ್ದಿತಾಣ ಸುದ್ದಿ ಬಿತ್ತರಿಸಿತ್ತು. ಈ ಸುದ್ದಿ ವ್ಯಾಪಕ  ವೈರಲ್ ಆಗಿ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದವು. ದಿ ನೈರ್ ಸುದ್ದಿಯನ್ನು ಅಲ್ಲಗಳೆದಿದ್ದ ಬಿಜೆಪಿ ಇದು ಸತ್ಯಕ್ಕೆ ದೂರವಾದದ್ದು. ಲೇಖನ ದುರುದ್ದೇಶ ಪೂರಿತವಾದದ್ದಾಗಿದ್ದು,  ಅಮಿತ್ ಶಾ ಅವರ ಪರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ ಎಂದು ಹೇಳಿತ್ತು.

ಇದರ ಬೆನ್ನಲ್ಲೇ ದಿ ವೈರ್ ಅಂತರ್ಜಾಲ ಸುದ್ದಿತಾಣದ ವಿರುದ್ಧ ಅಮಿತ್ ಶಾ ಪುತ್ರ ಜಯ್ ಶಾ 100 ಕೋಟಿ ಪರಿಹಾರ ಕೋರಿ ಮಾನನಷ್ಟ ಮೊಕ್ಕದ್ದಮೆ ಹೂಡುವುದಾಗಿ ಹೇಳಿದ್ದರು. ಈ ಹೇಳಿಕೆ ಬಳಿಕ ಸರ್ಕಾರಿ ಪರ ವಕೀಲ ತುಷಾರ್  ಮೆಹ್ತಾ ತಾವು ಜಯ್ ಶಾ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com