ಸ್ಟಾರ್ಟ್-ಅಪ್ ಇಂಡಿಯಾದ ಹೊಸ ಐಕಾನ್ ಜಯ್ ಶಾ: ಗುಜರಾತ್ ನಲ್ಲಿ ರಾಹುಲ್ ಟೀಕೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಸ್ಟಾರ್ಟ್-ಅಫ್ ಇಂಡಿಯಾದ ಹೊಸ ಐಕಾನ್ ಜಯ್ ಶಾ ಎಂದು ಮಂಗಳವಾರ ಟೀಕಿಸಿದ್ದಾರೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ಗಾಂಧಿನಗರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದು, ಸ್ಟಾರ್ಟ್-ಅಫ್ ಇಂಡಿಯಾದ ಹೊಸ ಐಕಾನ್ ಜಯ್ ಶಾ ಎಂದು ಮಂಗಳವಾರ ಟೀಕಿಸಿದ್ದಾರೆ. 

ಗುಜರಾತ್ ಚುನಾವಣಾ ಪ್ರಚಾರ ಪ್ರವಾಸ ನವಸರ್ಜನ್ ಯಾತ್ರೆಯ 2ನೇ ದಿನವಾದ ಇಂದು ವಡೋದರಾದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಅವರು, ಸ್ಟಾರ್ಟ್ ಅಪ್ ಇಂಡಿಯಾ ಬಗ್ಗೆ ಕೇಳಿದ್ದೀರಾ?... ಸ್ಟಾರ್ಟ್ ಅಫ್ ಇಂಡಿಯಾದ ಐಕಾನ್ ಬಗ್ಗೆ ಕೇಳಿದ್ದೀರಾ... ಅದು ಬೇರಾರು ಅಲ್ಲ ಜಯ್ ಶಾ? ಭಾರತದ ಚೌಕಿದಾರ್ ಇದೀಗ ಮೌನವಹಿಸಿದ್ದಾರೆ...ಜಯ್ ಶಾ ಪ್ರಕರಣ ಕುರಿತಂತೆ ತುಟಿಬಿಚ್ಚಿ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. 

ಬಿಜೆಪಿ ಆರ್'ಎಸ್ಎಸ್ ಸಂಘಟನೆ ಆಗಿದೆ, ಅದರಲ್ಲಿ ಎಷ್ಟು ಜನ ಮಹಿಳೆಯರಿದ್ದಾರೆ... ಎಂದಾದರೂ ಮಹಿಳೆಯರು ತುಂಡು ಬಟ್ಟೆ ಹಾಕಿಕೊಂಡಿದ್ದನ್ನು ನೋಡಿದ್ದೀರಾ? ನಾನಂತೂ ನೋಡಿಲ್ಲ...ಮಹಿಳೆಯರು ಎಲ್ಲಿಯವರೆಗೂ ಮೌನವಾಗಿರುತ್ತಾರೋ ಅಲ್ಲಿಯವರೆಗೂ ಎಲ್ಲವೂ ಸರಿಯಿರುತ್ತದೆ. ಮಹಿಳೆಯರು ದನಿ ಎತ್ತಿದರೆ, ಅವರ ಬಾಯಿ ಮುಚ್ಚಿಸುತ್ತಾರೆ. ನಮ್ಮ ಕಾಂಗ್ರೆಸ್ ನಲ್ಲಿ ಹಾಗಲ್ಲ. ಒಮ್ಮೆ ನಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುತ್ತೇವೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೆಲ್ಫೀ ತೆಗೆದುಕೊಳ್ಳುವುದರಲ್ಲಿ ಬಹಳ ಸಂತೋಷದಿಂದ ಇರುತ್ತಾರೆ. ನೀವು ತೆಗೆದುಕೊಳ್ಳುವ ಸೆಲ್ಫೀ ಚೀನಾ ಯುವಕರಿಗೆ ಉದ್ಯೋಗಾವಕಾಶವನ್ನು ದೊರಕಿಸಿಕೊಟ್ಟಿದೆ. ಸೆಲ್ಫೀ ತೆಗೆದುಕೊಳ್ಳುವ ಫೋನ್ ಗಳು ಚೀನಾ ಉತ್ಪಾದಿತ ಫೋನ್ ಗಳಾಗಿವೆ. ಮೋದಿಯವರು ಭಾರತದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವತ್ತ ಗಮನ ಹರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. 

20147ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಾಣುವ ಮೂಲಕ ಸಾಕಷ್ಟು ಪಾಠವನ್ನು ಕಲಿತಿದೆ. ಬಿಜೆಪಿಯಿಂದ ನಾವು ಸಾಕಷ್ಟು ಕಲಿತುಕೊಂಡಿದ್ದೇವೆ. 2014ರ ಪಾಠ ನಮಗೆ ಲಾಭವಾಗಲಿದೆ. ನಮ್ಮ ಕುಟುಂಬ ಗಾಂಧೀಜಿಯವರ ಮೌಲ್ಯಗಳನ್ನು ಹೊಂದಿದೆ. ನನ್ನ ತಂದೆ ರಾಜೀವ್ ಗಾಂಧಿಯವರ ಹಂತಕನ ಮೃತದೇಹವನ್ನು ನೋಡಿದಾಗ ನಿಜಕ್ಕೂ ಬೇಸರವಾಯಿತು. ಈ ಬಗೆಗಿನ ಮನದಾಳದ ಮಾತುಗಳನ್ನು ಪ್ರಿಯಾಂಕಾ ಅವರ ಜೊತೆಗೆ ಹಂಚಿಕೊಂಡಿದ್ದೆ. ಈ ವೇಳೆ ಆಕೆ ಕೂಡ ಬೇಸರವನ್ನು ವ್ಯಕ್ತಪಡಿಸಿದ್ದರು. 

ನಮ್ಮಲ್ಲಿರುವ ವ್ಯವಸ್ಥೆಗಳು ನಾವಿನ್ಯತೆಗಳನ್ನು ಕೊಲ್ಲುತ್ತಿದೆ. ಜನರು ಅದನ್ನು ಹತ್ಯೆ ಮಾಡುತ್ತಿಲ್ಲ. ಅಧಿಕಾರಶಾಹಿ ಕೊಲ್ಲುತ್ತಿದೆ. ಗೃಹ ಸಚಿವಾಲಯ ಕೊಲ್ಲುತ್ತಿದೆ. ಒಬ್ಬ ವ್ಯಕ್ತಿ ಈ ರೀತಿಯ ಪ್ರಯತ್ನಗಳನ್ನು ಮಾಡುವಾದ, 50 ಜನರು ಅದನ್ನು ಹಿಂದಕ್ಕೆ ತಳ್ಳಬೇಕು. ನಾಯಕರಾದವರು 5-10 ವರ್ಷ ಮುಂದಕ್ಕೆ ಆಲೋಚನೆ ಮಾಡಬೇಕು. ಜನರನ್ನು ಘಾಸಿಗೊಳಿಸುವ ಕೆಲಸಗಳನ್ನು ಮಾಡಿ ಜನರ ಮೇಲೆ ಬಲವಂತದಿಂದ ಯಾವುದೇ ನಿಯಮಗಳನ್ನು ಹೇರಬಾರದು ಎಂದು ತಿಳಿಸಿದ್ದಾರೆ. 

ಅಧಿಕಾರದಲ್ಲಿದ್ದಾಗ ನಮ್ಮ ಕಾರ್ಯಕ್ಷಮೆ 10 ರಲ್ಲಿ 5 ಇದ್ದರೂ ನಾವು ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಿದ್ದೆವು. ಕ್ಷಮೆ ಕೆಲಸಕ್ಕೆ ಬರುವುದಿಲ್ಲ. ಮುಂಬರುವ 5-10 ವರ್ಷಗಳಲ್ಲಿ ಸರ್ಕಾರ ದಿನಕ್ಕೆ 30,000ದಿಂದ 40,000 ಉದ್ಯೋಗವಕಾಶಗಳನ್ನು ಸೃಷ್ಟಿಸದೇ ಹೋದಲ್ಲಿ ಜನರ ಆಕ್ರೋಶಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com