ಬಿಹಾರ ಶಿಕ್ಷಣ ಮಂಡಳಿ ಎಡವಟ್ಟು: ಕಾಶ್ಮೀರ ಪ್ರತ್ಯೇಕ ದೇಶವಂತೆ!

ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರು. ಬಿಹಾರ ಶಿಕ್ಷಣ ಮಂಡಳಿ ಮಾತರ್ ತನ್ನ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯಲ್ಲಿ...
ಪ್ರಶ್ನೆ ಪತ್ರಿಕೆ
ಪ್ರಶ್ನೆ ಪತ್ರಿಕೆ
ಪಾಟ್ನಾ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರು. ಬಿಹಾರ ಶಿಕ್ಷಣ ಮಂಡಳಿ ಮಾತರ್ ತನ್ನ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಯಲ್ಲಿ ಕಾಶ್ಮೀರ ಭಾರತದಲ್ಲಿಲ್ಲ ಅದೊಂದು ಸ್ವತಂತ್ರ ದೇಶ ಎಂಬಂತಹ ಪ್ರಶ್ನೆಯನ್ನು ಕೇಳಲಾಗಿದೆ. 
ಪ್ರಶ್ನೆ ಪತ್ರಿಕೆಯಲ್ಲಿ ಚೀನಾ, ನೇಪಾಳ, ಇಂಗ್ಲೆಂಡ್, ಕಾಶ್ಮೀರ ಮತ್ತು ಭಾರತದ ಜನರನ್ನು ಏನೆಂದು ಕರೆಯಲಾಗುತ್ತಿದೆ ಎಂಬ ಪ್ರಶ್ನೆಯಿದೆ. ಮುಜುಗರದ ಸಂಗತಿಯೆಂದರೆ ಕೇಂದ್ರ ಸರ್ಕಾರ ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳಲಾಗಿದೆ. 
ಅಕ್ಟೋಬರ್ 5ರಂದು ಪ್ರಾರಂಭವಾದ ಪರೀಕ್ಷೆಗಳು ಬುಧವಾರದಂದು ಕೊನೆಗೊಳ್ಳಲಿವೆ. ಮಂಗಳವಾರ ನಡೆದ ಪರೀಕ್ಷೆಯಲ್ಲಿ ವೈಶಾಲಿ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಈ ತಪ್ಪನ್ನು ಗುರುತಿಸಿದ್ದಾನೆ. ಜಿಲ್ಲೆಯ ಶಿಕ್ಷಣ ಅಧಿಕಾರಿ ಸಂಗೀತಾ ಸಿನ್ಹಾರನ್ನು ಈ ಕುರಿತು ಪ್ರಶ್ನಿಸಿದಾಗ ನಾನು ರಜೆಯ ಮೇಲೆ ಇದ್ದೆ. ಇಂದೇ ಕೆಲಸಕ್ಕೆ ಮರಳಿದ್ದೇನೆ ಈ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com