18ಕ್ಕಿಂತ ಕಡಿಮೆ ವಯಸ್ಸಿನ ಪತ್ನಿ ಜೊತೆ ಲೈಂಗಿಕ ಸಂಪರ್ಕ ಅತ್ಯಾಚಾರವೆಂದು ಪರಿಗಣನೆ: ಸುಪ್ರೀಂ ಕೋರ್ಟ್

18 ವರ್ಷಕ್ಕಿಂತ ಕೆಳಗಿನ ಪತ್ನಿ ಜೊತೆಗೆ ಲೈಂಗಿಕ ಸಂಪರ್ಕ ಶಿಕ್ಷಾರ್ಹ ಅಪರಾಧವಾಗಿದ್ದು ಅದನ್ನು ಅತ್ಯಾಚಾರ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 18 ವರ್ಷಕ್ಕಿಂತ ಕೆಳಗಿನ ಪತ್ನಿ ಜೊತೆಗೆ ಲೈಂಗಿಕ ಸಂಪರ್ಕ ಶಿಕ್ಷಾರ್ಹ ಅಪರಾಧವಾಗಿದ್ದು ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
15 ವರ್ಷಕ್ಕಿಂತ 18 ವರ್ಷದ ನಡುವಿನ ಪತ್ನಿಯನ್ನು ದೈಹಿಕ ಸಂಪರ್ಕಕ್ಕೆ ಬಲವಂತಪಡಿಸುವುದಕ್ಕೆ ಕಾನೂನು ಮೂಲಕ ನ್ಯಾಯಕ್ಕಾಗಿ ಮೊರೆ ಹೋಗಲು ಎಫ್ಐಆರ್ ದಾಖಲಿಸಲು ಅವಕಾಶ ನೀಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಮದನ್ ಬಿ ಲೊಕೂರ್ ಅವರ ನೇತೃತ್ವದ ನ್ಯಾಯಪೀಠ ಇಂದು ಈ ಆದೇಶ ನೀಡಿದೆ. 18 ವರ್ಷಕ್ಕಿಂತ ಕೆಳಗಿನ ವಿವಾಹಿತ ಹೆಣ್ಣು ಮಕ್ಕಳನ್ನು ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುವುದನ್ನು ಅತ್ಯಾಚಾರವೆಂದು ಪರಿಗಣಿಸಬೇಕೆಂದು ನ್ಯಾಯಪೀಠ ಹೇಳಿದೆ.
ಇದೇ ಸಂದರ್ಭದಲ್ಲಿ ನ್ಯಾಯಧೀಶರು ಬಾಲ್ಯ ವಿವಾಹ ಪದ್ಧತಿ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.ಸಾಮಾಜಿಕ ನ್ಯಾಯ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ಹೇಳಿದರು.ಅತ್ಯಾಚಾರ ಕಾನೂನಿನಲ್ಲಿ ವಿನಾಯಿತಿಗಳು ತಾರತಮ್ಯ, ವಿಚಿತ್ರವಾದ ಮತ್ತು ಅನಿಯಂತ್ರಿತವಾದುದು ಎಂದು ಕೂಡ ನ್ಯಾಯಾಧೀಶರು ಹೇಳಿದರು.
ಅತ್ಯಾಚಾರ ಕಾನೂನಿನಲ್ಲಿನ ವಿನಾಯಿತಿ ಕಾನೂನುಗಳಿಗೆ ವಿರುದ್ಧವಾಗಿ, ಹೆಣ್ಣು ಮಕ್ಕಳ ದೈಹಿಕ ಸಮಗ್ರತೆಯನ್ನು ಉಲ್ಲಂಘಿಸುತ್ತದೆ ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ.
15 ವರ್ಷಕ್ಕಿಂತ ಮೇಲಿನ 18 ವರ್ಷಕ್ಕಿಂತ ಕೆಳಗಿನ ಪತ್ನಿಯ ಜೊತೆ ಲೈಂಗಿಕ ಸಂಪರ್ಕ ನಡೆಸಲು ಅತ್ಯಾಚಾರ ಕಾನೂನಿನಲ್ಲಿ ಅನುಮತಿ ನೀಡಿರುವ ವಿಶೇಷ ವಿನಾಯಿತಿ ಷರತ್ತಿನ ನ್ಯಾಯಸಮ್ಮತೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com