ಪತ್ನಿಯರ ಲೈಂಗಿಕ ಗುಲಾಮಗಿರಿಗೂ ಕೇಂದ್ರ ಸರ್ಕಾರದ ಸಮರ್ಥನೆ: ಹಿರಿಯ ವಕೀಲ ಡಾ.ಕೊಲಿನ್ ಗಾನ್ ಸಾಲ್ವ್ಸ್

ಕೇಂದ್ರ ಸರ್ಕಾರ ಅತ್ಯಾಚಾರವನ್ನೂ ಕೂಡ ಸಮರ್ಥಿಸಿಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಡ್ವೋಕೇಟ್ ಡಾ.ಕೊಲಿನ್ ಗಾನ್ ಸಾಲ್ವ್ಸ್ ಕಿಡಿಕಾರಿದ್ದಾರೆ.
ಸುಪ್ರೀಂ ಕೋರ್ಟ್ ಅಡ್ವೋಕೇಟ್ ಡಾ.ಕೊಲಿನ್ ಗಾನ್ ಸಾಲ್ವ್ಸ್ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ ಅಡ್ವೋಕೇಟ್ ಡಾ.ಕೊಲಿನ್ ಗಾನ್ ಸಾಲ್ವ್ಸ್ (ಸಂಗ್ರಹ ಚಿತ್ರ)
ನವದೆಹಲಿ: ಕೇಂದ್ರ ಸರ್ಕಾರ ಅತ್ಯಾಚಾರವನ್ನೂ ಕೂಡ ಸಮರ್ಥಿಸಿಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಡ್ವೋಕೇಟ್ ಡಾ.ಕೊಲಿನ್ ಗಾನ್ ಸಾಲ್ವ್ಸ್ ಕಿಡಿಕಾರಿದ್ದಾರೆ.
18 ವರ್ಷದೊಳಗಿನ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಹಿರಿಯ ಸುಪ್ರೀಂ ಕೋರ್ಟ್ ಅಡ್ವೋಕೇಟ್ ಡಾ.ಕೊಲಿನ್ ಗಾನ್ ಸಾಲ್ವ್ಸ್ ಅವರು, 18 ವರ್ಷದೊಳಗಿನ ಪತ್ನಿಯೊಂದಿಗಿನ ಸಮಹಮತವಿಲ್ಲದ ಲೈಂಗಿಕ ಕ್ರಿಯೆ ಕೂಡ ಅತ್ಯಾಚಾರವಾಗುತ್ತದೆ. ಆದರೆ ಇದಕ್ಕೆ ಕೊಕ್ಕೆ ಹಾಕಿದ್ದ ಕೇಂದ್ರ ಸರ್ಕಾರ ಪತ್ನಿಯೊಂದಿಗಿನ ಸಹಮತವಲ್ಲದ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಅಲ್ಲ ಎಂದು ಪರಿಗಣಿಸಬೇಕು ಎಂದು ಹೇಳುತ್ತಿದೆ. ಆ ಮೂಲಕ ಪತ್ನಿಯರ ಲೈಂಗಿಕ ಗುಲಾಮಗಿರಿಯನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ನಡೆಯುವ 5 ರಲ್ಲಿ 1 ಮದುವೆಗಳಲ್ಲಿ ಪತ್ನಿಯರೊಂದಿಗೆ ಸಹಮತವಿಲ್ಲದ ಲೈಂಗಿಕ ಕ್ರಿಯೆಗಳು ನಡೆಯುತ್ತಿವೆ. ದೇಶದಲ್ಲಿ ದಾಖಲಾಗುವ ಅತ್ಯಾಚಾರ ಪ್ರಕರಣ ಗಳ ಪೈಕಿ ಅಪ್ರಾಪ್ತ ಪತ್ನಿಯರ ಮೇಲೆ ನಡೆಯುವ ಅತ್ಯಾಚಾರಗಳ ಪ್ರಮಾಣವೇ ಶೇ. 9 ರಿಂದ ಶೇ.15 ರಷ್ಟಿರುತ್ತದೆ. 2015ರಲ್ಲಿ ರಾಜ್ಯಸಭೆಯ ಕಾಂಗ್ರೆಸ್ ಸದಸ್ಯರೊಬ್ಬರು ಪತ್ನಿಗೆ ಸಹಮತವಿಲ್ಲದ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಬಾರದು ಎಂದು ಹೇಳಿದ್ದರು. ಆ ಮೂಲಕ ಪತ್ನಿ ಮೇಲೆ ಅತ್ಯಾಚಾರ ಗೈಯ್ಯುವ ಪತಿಗೆ ಕಾನೂನಾತ್ಮಕ ರಕ್ಷಣೆ ನೀಡಲಾಗಿತ್ತು.

ಬಳಿಕ 2 ವರ್ಷಗಳ ಬಳಿಕ ಈ ಆರ್ಜಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ದೆಹಲಿ ಹೈಕೋರ್ಟ್ ಪತ್ನಿಗೆ ಸಹಮತವಿಲ್ಲದ ಲೈಂಗಿಕ ಕ್ರಿಯೆ ಕೂಡ ಅತ್ಯಾಚಾರವಾಗಿ ಪರಿಗಣಿಸ್ಪಲ್ಟಡುತ್ತದೆ ಎಂದು ತೀರ್ಪು ನೀಡಿತ್ತು. ದೆಹಲಿ ಕೋರ್ಟ್ ನ ಆದೇಶವನ್ನು ಪ್ರಶ್ನಿಸಿದ್ದ ಕೇಂದ್ರ ಸರ್ಕಾರ ದೆಹಲಿ ಕೋರ್ಟ್ ನ ತೀರ್ಪು ವೈವಾಹಿಕ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com