ಡಿಜಿಟಲ್ ಇಂಡಿಯಾದಿಂದ ಭಾರತದ ಜಿಡಿಪಿ ಬೆಳವಣಿಗೆಗೆ ಸಹಕಾರ: ಸಚಿವ ಕೆಜೆ ಅಲ್ಫೋನ್ಸ್

ಡಿಜಿಟಲ್ ಇಂಡಿಯಾ ಯೋಜನೆ 2025 ರ ವೇಳೆಗೆ ಭಾರತದ ಜಿಡಿಪಿ ಬೆಳವಣಿಗೆಗೆ ಶೇ.20-30 ರಷ್ಟು ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಐಟಿ ಹಾಗೂ ಎಲೆಕ್ಟ್ರಾನಿಕ್ಸ್ ಖಾತೆಯ ರಾಜ್ಯ ಸಚಿವ ಕೆಜೆ ಅಲ್ಫಾನ್ಸ್
ಕೆಜೆ ಅಲ್ಫೋನ್ಸ್
ಕೆಜೆ ಅಲ್ಫೋನ್ಸ್
ನವದೆಹಲಿ: ಡಿಜಿಟಲ್ ಇಂಡಿಯಾ ಯೋಜನೆ 2025 ರ ವೇಳೆಗೆ ಭಾರತದ ಜಿಡಿಪಿ ಬೆಳವಣಿಗೆಗೆ ಶೇ.20-30 ರಷ್ಟು ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಐಟಿ ಹಾಗೂ ಎಲೆಕ್ಟ್ರಾನಿಕ್ಸ್ ಖಾತೆಯ ರಾಜ್ಯ ಸಚಿವ ಕೆಜೆ ಅಲ್ಫಾನ್ಸ್ ಹೇಳಿದ್ದಾರೆ. 
ಡಿಜಿಟಲ್ ಇಂಡಿಯಾದ ಅಡಿಯಲ್ಲಿ ರೂಪಿಸಲಾಗಿರುವ ಯೋಜನೆಗಳು ಕಾರ್ಯರೂಪಕ್ಕೆ ಬರಲು ಸಿದ್ಧವಾಗಿವೆ. ಈಗಾಗಲೇ ಜಾರಿಗೊಂಡಿರುವ ಹಲವು ಕ್ರಮಗಳು ಜನತೆ ಹಾಗೂ ಅವರ ಉದ್ಯಮದ ಮೇಲೆ ಪರಿಣಾಮ ಬೀರಿವೆ ಎಂದು ಅಲ್ಫಾನ್ಸ್ ಹೇಳಿದ್ದಾರೆ. 
ಅಸೋಚಾಮ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕ್ಲೌಡ್ ಸರ್ವೀಸ್, ಡಿಜಿಲಾಕರ್ ಈಗ ಮಿಲಿಯನ್ ಗಟ್ಟಲೆ ಬಳಕೆದಾರರನ್ನು ಹೊಂದಿದೆ. ಸರ್ಕಾರದೊಂದಿಗೆ ಸಂವಹನ ನಡೆಸುವುದಕ್ಕಾಗಿ ಕಲ್ಪಿಸಲಾಗಿದ್ದ ಮೈಗೌರ್ನಮೆಂಟ್ ಆಪ್ ನ್ನು 1 ಮಿಲಿಯನ್ ಜನರು ಬಳಕೆ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com