ಬಿಎಂಸಿ ಉಪ ಚುನಾವಣೆ: ಶಿವಸೇನೆ ವಿರುದ್ಧ ಬಿಜೆಪಿಗೆ ಭರ್ಜರಿ ಜಯ

ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಉಪ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿ ಜಾಗೃತಿ ಪಾಟೀಲ್ ಭರ್ಜರಿ ಜಯ ಗಳಿಸಿದ್ದಾರೆ...
ಬಿಜೆಪಿ
ಬಿಜೆಪಿ
ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಉಪ ಚುನಾವಣೆಯಲ್ಲಿ ಶಿವಸೇನೆ ಅಭ್ಯರ್ಥಿ ವಿರುದ್ಧ ಬಿಜೆಪಿ ಅಭ್ಯರ್ಥಿ ಜಾಗೃತಿ ಪಾಟೀಲ್ ಭರ್ಜರಿ ಜಯ ಗಳಿಸಿದ್ದಾರೆ. 
ಬಿಎಂಸಿಯ ಬಂದೂಪ್ ನ ವಾರ್ಡ್ 116ಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಾಗೃತಿ ಪಾಟೀಲ್ ಅವರು 11,129 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ. ಇನ್ನು ಶಿವಸೇನೆ ಅಭ್ಯರ್ಥಿ ಮೀನಾಕ್ಷಿ ಪಾಟೀಲ್ 6,337 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಮೀನಾಕ್ಷಿ ಪಾಟೀಲ್ ಪಾಟೀಲ್ ಅವರು ಶಿವಸೇನಾ ಶಾಸಕ ಅಶೋಕ್ ಪಾಟೀಲ್ ಅವರ ಪತ್ನಿ. 
ಏಪ್ರಿಲ್ 25ರಂದು ಕಾಂಗ್ರೆಸ್ ನ ಕಾರ್ಪೋರೇಟರ್ ಪ್ರಮೀಳಾ ಪಾಟೀಲ್ ಅವರು ಮೃತಪಟ್ಟಿದ್ದರಿಂದ ಬಿಎಂಸಿ ಉಪ ಚುನಾವಣೆ ನಡೆದಿತ್ತು. ಬಿಜೆಪಿ ಮತ್ತು ಶಿವಸೇನೆ 82 ಮತ್ತು 84 ಸ್ಥಾನಗಳಲ್ಲಿ ಜಯಗಳಿಸಿದ್ದು ಇದೀಗ ತಮ್ಮ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಮಂದಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com