ಜಾರ್ಖಂಡ್ ಮಾಜಿ ಸಚಿವ ರಮೇಶ್ ಮುಂಡಾ ಹತ್ಯೆಗೆ ರೂ. 5 ಕೋಟಿ ಸುಪಾರಿ: ಮಾವೋವಾದಿ ಮುಖಂಡ

2008ರಲ್ಲಿ ನಡೆದ ಜೆಡಿಯು ಶಾಸಕ, ಮಾಜಿ ಸಚಿವ ರಮೇಶ್ ಮುಂಡಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮಾವೋವಾದಿ ಮುಖಂಡನಿಂದ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಮಾಜಿ ಸಚಿವನ್ನ ಹತ್ಯೆಗೆ 5
ಮಾವೋವಾದಿ
ಮಾವೋವಾದಿ
ರಾಂಚಿ: 2008ರಲ್ಲಿ ನಡೆದ ಜೆಡಿಯು ಶಾಸಕ, ಮಾಜಿ ಸಚಿವ ರಮೇಶ್ ಮುಂಡಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮಾವೋವಾದಿ ಮುಖಂಡನಿಂದ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಮಾಜಿ ಸಚಿವನ್ನ ಹತ್ಯೆಗೆ 5 ಕೋಟಿ ಸುಪಾರಿ ನೀಡಲಾಗಿತ್ತು ಎಂದು ಹೇಳಿದ್ದಾನೆ.
5 ಕೋಟಿ ಸುಪಾರಿ ನೀಡಿದ್ದನ್ನು ಬಂಧಿತ ಮಾವೋವಾದಿ ನಾಯಕ ಪಹಾನ್ ಒಪ್ಪಿಕೊಂಡಿದ್ದು, ಮಾಜಿ ಸಚಿವ  ಗೋಪಾಲಕೃಷ್ಣ ಪಟಾರ್ ಸುಪಾರಿ ನೀಡಿದ್ದರು ಎಂದು ಹೇಳಿರುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. 2008ರಲ್ಲಿ ನಡೆದ ಜೆಡಿಯು ಶಾಸಕ ರಮೇಶ್ ಮುಂಡಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮಾಜಿ ಸಚಿವ ಗೋಪಾಲಕೃಷ್ಣ ಪಟಾರ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅ.09 ರಂದು ಬಂಧಿಸಿತ್ತು. 
ತಮ್ಮ ರಾಜಕೀಯ ವಿರೋಧಿಯನ್ನು ಹತ್ಯೆ ಮಾಡಲು ನಕ್ಸಲರೊಂದಿಗೆ ಕೈಜೋಡಿಸಿದ ಆರೋಪದ ಮೇಲೆ ಪಟಾರ್ ಅಲಿಯಾಸ್ ರಾಜ ಪೆಟೆರ್ 5 ಕೋಟಿ ಸುಪಾರಿ ನೀಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಜುಲೈ 9, 2008ರಲ್ಲಿ ರಮೇಶ್ ಮುಂಡಾ ಅವರು ತಮ್ಮ ಸ್ವಕ್ಷೇತ್ರ ತಮರ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಹತ್ಯೆ ಮಾಡಲಾಗಿತ್ತು. ದಾಳಿಯಲ್ಲಿ ಅವರ ಇಬ್ಬರು ಗನ್ ಮ್ಯಾನ್ ಗಳು ಸಹ ಮೃತಪಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com