ತಾಜ್ ಮಹಲ್ ವಿವಾದ: ಪರಂಪರೆ ಬಿಟ್ಟು ಸಾಗಲಾಗದು- ಬಿಜೆಪಿ ಶಾಸಕನಿಗೆ ಪ್ರಧಾನಿ ಮೋದಿ ಚಾಟಿ

ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲ, ದೇಶಕ್ಕೆ ಅದೊಂದು ಕಪ್ಪುಚುಕ್ಕೆ ಎಂಬ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಹೇಳಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರೋಕ್ಷ ಅಸಮ್ಮತಿ...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ: ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲ, ದೇಶಕ್ಕೆ ಅದೊಂದು ಕಪ್ಪುಚುಕ್ಕೆ ಎಂಬ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರ ಹೇಳಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪರೋಕ್ಷ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ಕೆಲ ದಿನಗಳ ಹಿಂದಷ್ಟೇ ತಾಜ್ ಮಹಲ್ ಕುರಿತಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಸಂಗೀತ್ ಸೋಮ್ ಅವರ ಹೇಳಿಕೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಸಂಗೀತ್ ಸೋಮ್ ಹೇಳಿಕೆ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರೂ ಕೂಡ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. 

ಇಬ್ಬರೂ ನಾಯಕರ ಹೇಳಿಕೆಗಳು ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ನಿನ್ನೆ ಆಯುರ್ವೇದ ಕುರಿತಾದ ಸಮಾರಂಭದಲ್ಲಿ ಪರೋಕ್ಷವಾಗಿ ಬಿಜೆಪಿ ನಾಯಕನ ಹೇಳಿಕೆಗೆ ಚಾಟಿ ಬೀಸಿರುವ ಪ್ರಧಾನಿ ಮೋದಿಯವರು, ದೇಶದ ಹಿರಿಮೆ ಹೆಚ್ಚಿುವ ಪರಂಪರೆಯನ್ನು ಹಾಗೂ ಇತಿಹಾಸವನ್ನು ಬಿಟ್ಟು ದೇಶ, ನಾವು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ನಮ್ಮ ಪರಂಪರೆ ಇತಿಹಾಸದ ಬಗ್ಗೆ ಹೆಮ್ಮೆ ಪಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ ಕಾಲಕ್ರಮೇಣ ನಾವು ನಮ್ಮತನವನ್ನು ಹಾಗೂ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com