ಪಟಾಕಿ ನಿಷೇಧದ ನಡುವೆಯೂ ಅಪಾಯದ ಮಟ್ಟ ಮೀರಿದ ದೆಹಲಿ ವಾಯು ಮಾಲೀನ್ಯ!

ವಾಯುಮಾಲೀನ್ಯ ತಡೆಗಟ್ಟುವ ಉದ್ದೇಶದಿಂದ ಪಟಾಕಿ ಮೇಲೆ ಹೇರಿರುವ ನಿಷೇಧದ ಹೊರತಾಗಿಯೂ ರಾಜಧಾನಿ ದೆಹಲಿಯಲ್ಲಿ ವಾಯುಮಾಲೀನ್ಯ ಪ್ರಮಾಣ ಅಪಾಯದ ಮಟ್ಟ ಮೀರಿದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಾಯುಮಾಲೀನ್ಯ ತಡೆಗಟ್ಟುವ ಉದ್ದೇಶದಿಂದ ಪಟಾಕಿ ಮೇಲೆ ಹೇರಿರುವ ನಿಷೇಧದ ಹೊರತಾಗಿಯೂ ರಾಜಧಾನಿ ದೆಹಲಿಯಲ್ಲಿ ವಾಯುಮಾಲೀನ್ಯ ಪ್ರಮಾಣ ಅಪಾಯದ ಮಟ್ಟ ಮೀರಿದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ವಾಯುಮಾಲೀನ್ಯ ಸರ್ವೇಕ್ಷಣಾ ವೆಬ್ ಸೈಟ್ aqicn.org ವರದಿ ಮಾಡಿದ್ದು, ದೆಹಲಿಯಲ್ಲಿ ಈಗಾಗಲೇ ವಾಯು ಮಾಲೀನ್ಯ ಅಪಾಯದ ಮಟ್ಟ ಮೀರಿದೆ ಎಂದು ಹೇಳಿದೆ. ಪ್ರಮುಖವಾಗಿ ದೆಹಲಿಯ ಆನಂದ್ ವಿಹಾರ್  ಪ್ರದೇಶದಲ್ಲಿ ವಾಯುಮಾಲೀನ್ಯ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಆರ್ ಕೆ ಪುರಂನಲ್ಲಿ ಕನಿಷ್ಟ ಪ್ರಮಾಣದ ವಾಯುಮಾಲೀನ್ಯ ಕಂಡು ಬಂದಿದೆ ಎಂದು ತಿಳಿಸಿದೆ.
ದೆಹಲಿಯಲ್ಲಿ ಪಿಎಂ-10 ಪ್ರಮಾಣ ಪ್ರತೀ 2.5 ಕ್ಯೂಬಿಕ್ ಮೀಟರ್ ಗೆ 740 ಮೈಕ್ರೋ ಗ್ರಾಮ್ಸ್  ನಷ್ಟಿದೆ ಎಂದು ವೆಬ್ ಸೈಟ್ ವರದಿ ಮಾಡಿದೆ. ವಾಯು ಗುಣಮಟ್ಟ ಸೂಚ್ಯಂಕದ ಅನ್ವಯ ದೆಹಲಿಯ ಆನಂದ್ ವಿಹಾರ್ ಪ್ರದೇಶ ಅತ್ಯಂತ  ದೊಡ್ಡ ಮಟ್ಟದ ವಾಯುಮಾಲೀನ್ಯ ಪ್ರದೇಶವಾಗಿದ್ದು, ಇಲ್ಲಿ ಪಿಎಂ-10 ಪ್ರಮಾಣ ಪ್ರತೀ ಕ್ಯೂಬಿಕ್ ಮೀಟರ್ ಗೆ 740 ಮೈಕ್ರೋ ಗ್ರಾಮ್ಸ್ ನಷ್ಟಿದೆ. ಅಂತೆಯೇ ಪಂಜಾಬಿ ಭಾಗ್ ಪ್ರದೇಶದಲ್ಲಿ 466ರಷ್ಟಿದ್ದು, ಪಟ್ಟಿಯಲ್ಲಿ ಆರ್ ಕೆ ಪುರಂ  ಕೊನೆಯ ಸ್ಥಾನದಲ್ಲಿದೆ. ಆರ್ ಕೆ ಪುರಂ ನಲ್ಲಿ ಪಿಎಂ-10 ಪ್ರಮಾಣ 298ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇನ್ನು ದೆಹಲಿಯ ಪ್ರಸ್ತುತ ಪರಿಸ್ಥಿತಿಗೆ ಇತ್ತೀಚೆಗೆ ನಗರದಲ್ಲಿ ಉಂಟಾದ ಅಗ್ನಿ ಅವಘಡಗಳ ಕೊಡುಗೆ ಕೂಡ ಇದ್ದು, ಇತ್ತೀಚೆಗೆ ಸಂಭವಿಸಿದ್ದ ಘಾಜಿಪುರ ಅಗ್ನಿ ಅವಘಡದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ  ಆವರಿಸಿತ್ತು.
ಸುಪ್ರೀಂ ಕೋರ್ಟ್ ಪಟಾಕಿ ಮೇಲೆ ನಿಷೇಧ ಹೇರದೇ ಇದ್ದಿದ್ದರೆ ಈ ಪರಿಸ್ಥಿತಿ ಮತ್ತಷ್ಟು ಬಿಗಾಡಾಯಿಸುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತೆಯೇ ಸುಪ್ರೀಂ ಕೋರ್ಟ್ ನ ನಿರ್ಧಾರ ತೀರಾ ತಡವಾಗಿ ಬಂತು ಎಂದು  ಹೇಳಲಾಗಿದೆ. ಅಂತೆಯೇ ಪಟಾಕಿ ಮೇಲಿನ ನಿಷೇಧದಿಂದ ಮಾತ್ರ ವಾಯುಮಾಲೀನ್ಯ ನಿಯಂತ್ರಣ ಸಾಧ್ಯವಿಲ್ಲ ಎಂದು ಹೇಳಲಾಗಿದ್ದು, ವಾಹನ ಮತ್ತು ಕಾರ್ಖಾನೆಗಳ ಮೇಲೂ ನಿಯಂತ್ರಣ ಹೇರಬೇಕು ಎಂದು ಸಲಹೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com