ಇಬ್ಬರು ಪಾಕ್ ನಾಗರೀಕರಿಗೆ ಸುಷ್ಮಾ ಸ್ವರಾಜ್ ವೈದ್ಯಕೀಯ ವೀಸಾ ಮಂಜೂರು!

ವೈದ್ಯಕೀಯ ವೀಸಾಗಾಗಿ ಮನವಿ ಮಾಡಿದ್ದ ಪಾಕಿಸ್ತಾನದ ಇಬ್ಬರಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೀಸಾ ಮಂಜೂರು ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವೈದ್ಯಕೀಯ ವೀಸಾಗಾಗಿ ಮನವಿ ಮಾಡಿದ್ದ ಪಾಕಿಸ್ತಾನದ ಇಬ್ಬರಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವೀಸಾ ಮಂಜೂರು ಮಾಡಿದ್ದಾರೆ.
ವೈದ್ಯಕೀಯ ವೀಸಾಗಾಗಿ ಮನವಿ ಮಾಡಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಟ್ವಿಟರ್ ಖಾತೆಗೆ ಸರಣಿ ಟ್ವೀಟ್ ಗಳು ಬರುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸುತ್ತಿರುವ ಸುಷ್ಮಾ ಸ್ವರಾಜ್ ಅವರು ಅರ್ಹರಿಗೆ ವೈದ್ಯಕೀಯ  ವೀಸಾ ಮಂಜೂರು ಮಾಡುತ್ತಿದ್ದಾರೆ. ಅದರಂತೆ ಇದೀಗ ಮತ್ತಿಬ್ಬರು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಮಂಜೂರು ಮಾಡಲಾಗಿದ್ದು, ಮಗುವಿನ ಕಿಡ್ಮಿ ಕಸಿ ಶಸ್ತ್ರಚಿಕಿತ್ಸೆಗಾಗಿ ಮನವಿ ಮಾಡಿದ್ದ ತಂದೆಗೆ ಹಾಗೂ ಅನಾರೋಗ್ಯ ಪೀಡಿತ  ಹಿರಿಯ ನಾಗರಿಕರಿಗೆ ವೈದ್ಯಕೀಯ ವೀಸಾ ಮಂಜೂರು ಮಾಡಿದ್ದಾರೆ. 
ಈ ಬಗ್ಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ದೀಪಾವಳಿ ಸಂದರ್ಭದಲ್ಲಿ ವೈದ್ಯಕೀಯ ವೀಸಾಗಿ ಮನವಿ ಮಾಡಿರುವ ಎಲ್ಲ ಅರ್ಹರಿಗೆ ಭಾರತ ವೈದ್ಯಕೀಯ ವೀಸಾ ಮಂಜೂರು ಮಾಡಲಿದೆ. ಇಸ್ಲಾಮಾಬಾದಿನಲ್ಲಿರುವ  ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಹೇಳಿದ್ದಾರೆ.
ಇನ್ನು ಪ್ರಸ್ತುತ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನದ ಕಾಶಿಫ್ ಎಂಬುವವರಿಗೆ ವೀಸಾ ಮಂಜೂರು ಮಾಡಿದ್ದು, ಕಾಶಿಫ್ ಅವರ ಅನಾರೋಗ್ಯ ಪೀಡಿತ ಮಗುವಿನ ಔಷಧಿಗಳು ಮುಗಿದಿತ್ತು. ಈ ಹಿನ್ನಲೆಯಲ್ಲಿ ತಮಗೆ ನೆರವಾಗುವಂತೆ  ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ, ನಿಮ್ಮ ಮಗು ಸುರಕ್ಷಿತವಾಗಿರುತ್ತಾನೆ. ಚಿಂತೆ ಬೇಡ ನಿಮಗೆ ಭಾರತ ವೈದ್ಯಕೀಯ ವೀಸಾ ಮಂಜೂರು ಮಾಡುತ್ತದೆ ಎಂದು ಭರವಸೆ  ನೀಡಿದ್ದಾರೆ. 
ಮತ್ತೊಂದು ಟ್ವೀಟ್ ನಲ್ಲಿ ಕಿಡ್ಮಿ ಕಸಿ ಶಸ್ತ್ರ ಚಿಕಿತ್ಸೆಗಾಗಿ ಮನವಿ ಮಾಡಿದ್ದ ಹಿರಿಯ ಮಹಿಳೆಯೊಬ್ಬರಿಗೂ ವೀಸಾ ಮಂಜೂರು ಮಾಡಲಾಗಿದ್ದು, ತಮ್ಮ ತಾಯಿಯ ಶಸ್ತ್ರ ಚಿಕಿತ್ಸೆಗೆ ಮನವಿ ಮಾಡಿದ್ದ ರಫೀಖ್ ಮೆಮೋನ್ ಎಂಬುವವರಿಗೆ  ವೀಸಾ ಮಂಜೂರು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com