ಹಿಮಾಚಲ ಪ್ರದೇಶ: ಸೇತುವೆ ಕುಸಿತ- 6 ಮಂದಿಗೆ ಗಾಯ

ಹಿಂಚಾಲ ಪ್ರದೇಶದ ಚಂಬಾ ಪಟ್ಟಣ ಹಾಗೂ ಪಂಜಾಬ್'ನ ಪಠಾಣ್ ಕೋಟ್ ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ...
ಸೇತುವೆ ಕುಸಿತ
ಸೇತುವೆ ಕುಸಿತ
ಚಂಬಾ: ಹಿಂಚಾಲ ಪ್ರದೇಶದ ಚಂಬಾ ಪಟ್ಟಣ ಹಾಗೂ ಪಂಜಾಬ್'ನ ಪಠಾಣ್ ಕೋಟ್ ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. 
ಸೇತುವೆ ಕುಸಿದು ಬೀಳುವ ಸಂದರ್ಭದಲ್ಲಿ ಸ್ಥಳದಲ್ಲಿ ಒಂದು ಕಾರು, ಮಿನಿಟ್ರಕ್ ಹಾಗೂ ದ್ವಿಚಕ್ರ ವಾಹನಗಳು ಹೋಗುತ್ತಿದ್ದವು. ಸೇತುವೆ ಕುಸಿದು ಬೀಳುತ್ತಿದ್ದಂತೆಯೇ ವಾಹನಗಳು ನದಿಯೊಳಗೆ ಬಿದ್ದಿದೆ. ಕಾರು ಹಾಗೂ ಮಿನಿಟ್ರಕ್ ಹಿಂದಕ್ಕೆ ಸರಿದು ಮುರಿದು ಬಿದ್ದ ಸೇತುವೆ ಮೇಲೆನಿಂತಿವೆ. 
ಘಟನೆ ಗಾಯಗೊಂಡ 6 ಮಂದಿಯನ್ನು ಪಂಡಿತ್ ಜವಹರ ಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. 
ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಸುದೇಶ್ ಕುಮಾರ್ ಮೊಖ್ತಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
ಸೇತುವೆ ಕುಸಿತಕ್ಕೆ ಕಳಪೆ ವಸ್ತುಗಳ ಬಳಕೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು ವಿಚಾರಣೆಗೆ ಆದೇಶಿಸಿ, ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ. 
ಪ್ರಸ್ತುತ ಕುಸಿದು ಬಿದ್ದಿರುವ ಸೇತವೆಯನ್ನು 15 ವರ್ಷಗಳ ಹಿಂದೆ ನಬಾರ್ಡ್ (ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್) ಯೋಜನೆಯಡಿಯಲ್ಲಿ ನಿರ್ಮಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com