1.1 ಬಿಲಿಯನ್ ಜನರಿಗೆ ಅಧಿಕೃತ ಅಸ್ತಿತ್ವವೇ ಇಲ್ಲ: ವಿಶ್ವಸಂಸ್ಥೆ ವರದಿ

ವಿಶ್ವಾದ್ಯಂತ ಸುಮಾರು 1.1 ಬಿಲಿಯನ್ ಜನರು ಅಧಿಕೃತವಾಗಿ ಅಸ್ತಿತ್ವದಲ್ಲೇ ಇಲ್ಲ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
1.1 ಬಿಲಿಯನ್ ಜನರಿಗೆ ಅಧಿಕೃತ ಅಸ್ತಿತ್ವವೇ ಇಲ್ಲ: ವಿಶ್ವಸಂಸ್ಥೆ ವರದಿ
1.1 ಬಿಲಿಯನ್ ಜನರಿಗೆ ಅಧಿಕೃತ ಅಸ್ತಿತ್ವವೇ ಇಲ್ಲ: ವಿಶ್ವಸಂಸ್ಥೆ ವರದಿ
ನ್ಯೂಯಾರ್ಕ್: ವಿಶ್ವಾದ್ಯಂತ ಸುಮಾರು 1.1 ಬಿಲಿಯನ್ ಜನರು ಅಧಿಕೃತವಾಗಿ ಅಸ್ತಿತ್ವದಲ್ಲೇ ಇಲ್ಲ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. 
ಗುರುತಿನ ಪುರಾವೆಯೇ ಇಲ್ಲದೇ 1.1 ಬಿಲಿಯನ್ ಜನರು ವಿಶ್ವಾದ್ಯಂತ ಜೀವಿಸುತ್ತಿದ್ದು, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಗುರುತಿನ ಪುರಾವೆಯೇ ಇಲ್ಲದೇ ಜೀವಿಸುತ್ತಿರುವವರ ಪೈಕಿ ಹಲವರು ಆಫ್ರಿಕಾ ಹಾಗೂ ಏಷ್ಯಾದಲ್ಲಿ ಜೀವಿಸುತ್ತಿದ್ದು, ಮೂರನೇ ಒಂದರಷ್ಟು ಮಕ್ಕಳ ಜನ್ಮ ನೋಂದಣಿಯೇ ಆಗದೇ ಅವರು ದೌರ್ಜನ್ಯಕ್ಕೊಳಗಾಗಿರುವ ಶಂಕೆ ಇದೆ ಎಂದು ವಿಶ್ವ ಬ್ಯಾಂಕ್ ನ ಐಡೆಂಟಿಫಿಕೇಷನ್ ಫಾರ್ ಡೆವಲಮ್ ಮೆಂಟ್ (ಐಡಿ4ಡಿ) ಅಭಿಯಾನದ ವರದಿ ಎಚ್ಚರಿಸಿದೆ. 
ಐಡಿ4 ಡಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವ ವಿಜಯಂತಿ ದೇಸಾಯಿ ಈ ಬಗ್ಗೆ ಮಾಹಿತಿ ನೀಡಿದ್ದು, 1.1 ಬಿಲಿಯನ್ ಜನರಿಗೆ ಅಧಿಕೃತ ಅಸ್ತಿತ್ವವೇ ಇಲ್ಲದಿರುವುದಕ್ಕೆ ಹಲವಾರು ಕಾರಣಗಳು ಇವೆ, ಪ್ರಮುಖವಾಗಿ ಜನರು ಹಾಗೂ ಸರ್ಕಾರದ ನಡುವೆ ಇರುವ ಅಂತರ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಹಲವಾರು ಕುಟುಂಬಗಳಿಗೆ ಜನನದ ನೋಂದಣಿಯ ಮಹತ್ವದ ಬಗ್ಗೆ ಮಾಹಿತಿಯೇ ಇರುವುದಿಲ್ಲ, ನೋಂದಣಿಯಾಗದೇ ಮೂಲಭೂತ ಹಕ್ಕು ಹಾಗೂ ಸವಲತ್ತುಗಳು ಸಿಗುವುದಿಲ್ಲ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com