ಹೆದ್ದಾರಿಯಲ್ಲಿ ಇಳಿದ ವಾಯು ಸೇನೆಯ ಯುದ್ಧ ವಿಮಾನಗಳು
ಹೆದ್ದಾರಿಯಲ್ಲಿ ಇಳಿದ ವಾಯು ಸೇನೆಯ ಯುದ್ಧ ವಿಮಾನಗಳು

ಭಾರತೀಯ ವಾಯುಸೇನೆ ಯುದ್ಧ ವಿಮಾನಗಳಿಗೆ ರನ್ ವೇ ಆಗಿ ಮಾರ್ಪಟ್ಟ ಆಗ್ರಾ ಎಕ್ಸ್ ಪ್ರೆಸ್ ವೇ!

ಭಾರತೀಯ ವಾಯುಸೇನೆಯ ಬಹು ನಿರೀಕ್ಷಿತ ಯುದ್ಧ ವಿಮಾನಗಳ ಹೆದ್ದಾರಿಯಲ್ಲಿ ಭೂಸ್ಪರ್ಶ ತರಬೇತಿ ಕಾರ್ಯ ಉತ್ತರ ಪ್ರದೇಶದ ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಯಶಸ್ವಿಯಾಗಿ ಆರಂಭಗೊಂಡಿದೆ.
ಆಗ್ರಾ: ಭಾರತೀಯ ವಾಯುಸೇನೆಯ ಬಹು ನಿರೀಕ್ಷಿತ ಯುದ್ಧ ವಿಮಾನಗಳ ಹೆದ್ದಾರಿಯಲ್ಲಿ ಭೂಸ್ಪರ್ಶ ತರಬೇತಿ ಕಾರ್ಯ ಉತ್ತರ ಪ್ರದೇಶದ ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಯಶಸ್ವಿಯಾಗಿ ಆರಂಭಗೊಂಡಿದೆ.
ಭಾರತೀಯ ವಾಯುಪಡೆ, ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಕೈಗೊಂಡಿರುವ ಕಾರ್ಯಾಚರಣೆಯ ತಾಲೀಮಿನ ಭಾಗವಾಗಿ 32 ಟ್ರಾಸ್ಪೋರ್ಟ್ ವಿಮಾನಗಳು, ಎಸ್ ಯು-30 ಸೇರಿದಂತೆ ಐಎಎಫ್ ನ ಮುಂಚೂಣಿಯಲ್ಲಿರುವ ಫೈಟರ್ ಜೆಟ್ ಗಳು ಹಾಗೂ ಮಿರಾಜ್-2000 ವಿಮಾನಗಳು ಹೆದ್ದಾರಿಯಲ್ಲಿ ಭೂಸ್ಪರ್ಶ ಮಾಡುತ್ತಿವೆ. ಈಗಾಗಲೇ ವಾಯುಸೇನೆಯ ಅತ್ಯಾಧುನಿಕ ಯುದ್ಧ ವಿಮಾನಗಳಾದ ಮಿರಾಜ್ 2000, ಸುಖೋಯ್, ಮಿಗ್ ಸರಣಿಯ ವಿಮಾನಗಳು ಇಳಿದಿದ್ದು, ಸೇನೆಯ ಅತ್ಯಂತ ದೊಡ್ಡ ಮತ್ತು ಸರಕು ಸಾಗಣಾ  ಜಂಬೋ ವಿಮಾನ ಹರ್ಕ್ಯುಲಸ್ ಸಿ-130 ಯುದ್ಧ ವಿಮಾನ ಕೂಡ ಯಶಸ್ವಿಯಾಗಿ ಭೂಸ್ಪರ್ಶ ಮಾಡಿದೆ.
ಕಾರ್ಯಾಚರಣೆಯ ತಾಲೀಮಿಗಾಗಿ ನಿನ್ನೆ ಸಂಜೆಯಿಂದಲೇ ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅಲ್ಲದೆ ಭದ್ರತೆಯನ್ನೂ ಕೂಡ ನಿಯೋಜಿಸಲಾಗಿತ್ತು. ಸೇನೆಯ ಗರುಡ ಕಮಾಂಡೋಗಳು ಸೇನೆಯ ಈ ತರಬೇತಿಗೆ ಭದ್ರತೆಗೆ ನಿಯೋಜಿಸಲಾಗಿತ್ತು. ತರಬೇತಿ ವೇಳೆ ಸೇನೆಯ ಮಿರಾಜ್ 2000, ಸುಖೋಯ್-30 ಎಂಕೆ ಐ, ಹರ್ಕುಲಸ್ ಸಿ-130 ಸೇರಿದಂತೆ ಸೇನೆಯ ಒಟ್ಟು 4 ಯುದ್ಧ ವಿಮಾನಗಳು ಹೈವೇಯಲ್ಲಿ ಭೂಸ್ಪರ್ಶ ಮಾಡಲಿವೆ.
ಸೇನಾ ತುರ್ತು ಸಂದರ್ಭಗಳಲ್ಲಿ ಸೇನಾಪಡೆಯ ರನ್ ವೇ ಗಳಿಗಾಗಿ ಕಾಯದೇ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಯುದ್ಧ ವಿಮಾನಗಳನ್ನು ಇಳಿಸುವ ಮತ್ತು ಟೇಕ್ ಆಫ್ ಮಾಡುವ ಸಂಬಂಧ ಈ ಹಿಂದೆ ಸೇನಾಧಿಕಾರಿಗಳು ಯೋಜನೆ ರೂಪಿಸಿದ್ದರು. ಅದರಂತೆ ಹೆದ್ದಾರಿಗಳಲ್ಲಿ ಫೈಟರ್ ಜೆಟ್ ಗಳನ್ನು ಇಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ 2016 ರ ಮೇ 21 ರಂದು ಮಿರಾಜ್-2000 ಫೈಟರ್ ವಿಮಾನವನ್ನು ಯಮುನಾ ಎಕ್ಸ್ ಪ್ರೆಸ್ ನಲ್ಲಿ ಲ್ಯಾಂಡ್ ಮಾಡಲಾಗಿತ್ತು. 
ಇದೇ ಮಾದರಿಯಲ್ಲಿ ಫೈಟರ್ ಜೆಟ್ ಗಳನ್ನು ಲ್ಯಾಂಡ್ ಮಾಡಿಸಲು 12 ಹೈವೆ ಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೂರು ಹೆದ್ದಾರಿಗಳು ನಕ್ಸಲರು ಹೆಚ್ಚಿರುವ ಹಾಗೂ ಪದೇ ಪದೇ ಪ್ರವಾಹ ಉಂಟಾಗುವ ಒಡಿಶಾ, ಜಾರ್ಖಂಡ್, ಚತ್ತೀಸ್ ಘಢವನ್ನು ಸಂಪರ್ಕಿಸುತ್ತವೆ. ಈ ಹೆದ್ದಾರಿಗಳನ್ನು ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Related Stories

No stories found.

Advertisement

X
Kannada Prabha
www.kannadaprabha.com