ನಟ ವಿಜಯ್ ಕ್ರೈಸ್ತ ಹೀಗಾಗಿ ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಿದ್ದಾರೆ: ಬಿಜೆಪಿ ನಾಯಕ ಹೆಚ್. ರಾಜಾ
ತಮಿಳಿನ ಮೆರ್ಸಲ್ ಚಿತ್ರದ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಲೇ ಇದ್ದು, ಚಿತ್ರದ ನಾಯಕ ನಟ ವಿಜಯ್ ಕ್ರಿಶ್ಚಿಯನ್ ಆಗಿದ್ದು, ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದ್ವೇಷಿಸುತ್ತಿದ್ದಾರೆಂದು ಬಿಜೆಪಿ ನಾಯಕ ಹೆಚ್. ರಾಜಾ...
ಚೆನ್ನೈ: ತಮಿಳಿನ ಮೆರ್ಸಲ್ ಚಿತ್ರದ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಲೇ ಇದ್ದು, ಚಿತ್ರದ ನಾಯಕ ನಟ ವಿಜಯ್ ಕ್ರಿಶ್ಚಿಯನ್ ಆಗಿದ್ದು, ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದ್ವೇಷಿಸುತ್ತಿದ್ದಾರೆಂದು ಬಿಜೆಪಿ ನಾಯಕ ಹೆಚ್. ರಾಜಾ ಅವರು ವಿವಾದಿತ ಆರೋಪವನ್ನು ಮಾಡಿದ್ದಾರೆ.
ಮೆರ್ಸಲ್ ಚಿತ್ರ ವಿವಾದ ಕುರಿತಂತೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ವಿಜಯ್ ಅವರು ಕ್ರೈಸ್ತರಾಗಿದ್ದು, ಅವರ ಹೆಸರು ಜೋಸೆಫ್ ವಿಜಯ್. ಅದಕ್ಕೆಂದೇ ಅವರು ಪ್ರಧಾನಿ ಮೋದಿಯವರ ಕನಸಿನ ಜಿಎಸ್ ಟಿ ವಿರುದ್ಧ ತುಚ್ಛ ಆಂದೋಲನ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಅಲ್ಲದೆ, ವಿಜಯ್ ಅವರು ಕ್ರೈಸ್ತರೆಂದು ಸಾಬೀತು ಮಾಡಲು ಅವರ ಮತದಾರ ಗುರುತು ಪತ್ರದ ಫೋಟೋ ಪ್ರಕಟಿಸಿದ್ದಾರೆ. ಅದಲ್ಲಿ ವಿಜಯ್ ಅವರು ಹೆಸರು ಜೋಸೆಫ್ ವಿಜಯ್ ಎಂದು ಇರುವುದು ಕಂಡು ಬಂದಿದೆ.
ಇದೇ ವೇಳೆ, ಮೆರ್ಸಲ್ ಚಿತ್ರದಲ್ಲಿ ಹಿಂದು ದೇವಾಲಯಗಳ ಅವಹೇಳನ ಮಾಡಲಾಗಿದೆ. ಸನ್ನಿವೇಶವೊಂದರಲ್ಲಿ ವಿಜಯ್ ಅವರು, ದೇಗುಲಗಳ ಬದಲು ಆಸ್ಪತ್ರೆ ಕಟ್ಟಬೇಕು ಎನ್ನುತ್ತಾರೆ. ಬರೀ ದೇಗುಲಗಳ ಪ್ರಸ್ತಾಪ ಮಾಡುವ ಅವರು ಚರ್ಚ್ ಕಟ್ಟಬಾರದು ಎಂದೇಕೆ ಹೇಳಲಿಲ್ಲ ಎಂದು ರಾಜಾ ಪ್ರಶ್ನಿಸಿದ್ದಾರೆ.