ನವದೆಹಲಿ: ಮೊಬೈಲ್ ಸಿಮ್ ಕಾರ್ಡ್‌ಗಳ ದುರ್ಬಳಕೆ ತಪ್ಪಿಸಲು ಆಧಾರ್ ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದ್ದು, ಇದೀಗ ಚಾಲ್ತಿಯಲ್ಲಿರುವ ಸಿಮ್ ಕಾರ್ಡ್ ಗಳ ಆಧಾರ್ ಲಿಂಕ್ ಅನ್ನು ಮರುಪರಿಶೀಲಿಸುವ ಕಾರ್ಯವನ್ನು ಮತ್ತಷ್ಟು ಸರಳಗೊಳಿಸಿದೆ.
ಅಧಿಕೃತ ಮೂಲಗಳ ಪ್ರಕಾರ, ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವುದು ಈಗ ಮತ್ತಷ್ಟು ಸರಳ ಮತ್ತು ಅನುಕೂಲಕರವಾಗಿದ್ದು, ಮರು ಪರಿಶೀಲನೆಗಾಗಿ ಮೊಬೈಲ್ ಕಂಪನಿಯವರು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ ಮತ್ತು ಒಟಿಪಿ ಮೂಲಕ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲಿದ್ದಾರೆ.
ವಿಕಲಚೇತನಿರಿಗೆ, ಹಿರಿಯ ನಾಗಕರಿಗೆ ಮತ್ತು ಅನಾರೋಗ್ಯ ಪೀಡಿತ ಗ್ರಾಹಕರ ಸಹಾಯಕ್ಕಾಗಿ ಅವರ ಮನೆ ಬಾಗಿಲಿಗೆ ತೆರಳಿ ಆಧಾರ್ ಲಿಂಕ್ ಕುರಿತು ಮರು ಪರೀಶಿಲಿಸುವಂತೆ ಟೆಲೆಕಾಂ ಕಂಪನಿಗಳಿಗೆ ಸರ್ಕಾರ ಸೂಚಿಸಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಸುಮಾರು 50 ಕೋಟಿ ಮೊಬೈಲ್ ಸಂಖ್ಯೆಗಳಿಗೆ ಈಗಾಗಲೇ ಆಧಾರ್ ಲಿಂಕ್ ಮಾಡಲಾಗಿದ್ದು, ಒಟಿಪಿ ಮೂಲಕ ಈ ಎಲ್ಲಾ ಆಧಾರ್ ಗಳನ್ನು ಮರು ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.