ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ 'ಪರಂಪರೆಯನ್ನು ದತ್ತು ಪಡೆಯಿರಿ' ಯೋಜನೆಯಡಿಯಲ್ಲಿ ದೇಶದ ಪ್ರಮುಖ 14 ಪಾರಂಪರಿಕ ತಾಣಗಳ ನಿರ್ವಹಣೆಗೆ ಖಾಸಗಿಯವರು ದತ್ತು ಪಡೆಯುವಂತೆ ಮನವಿ ಮಾಡಲಾಗಿತ್ತು. ಆದರೆ ವಿಶ್ವದ ಏಳು ಅದ್ಭುತಗಳ ಪೈಕಿ ಒಂದು ಎನಿಸಿರುವ ತಾಜ್ ಮಹಲ್ ದತ್ತು ಪಡೆಯಲು ಯಾರೂ ಮುಂದಾಗದಿರುವ ಅಂಶ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಖ್ಯಾತ ಐತಿಹಾಸಿಕ ಪ್ರವಾಸಿ ಕೇಂದ್ರಗಳಾದ ದೆಹಲಿಯ ಕುತುಬ್ ಮಿನಾರ್, ಜಂತರ್ ಮಂತರ್, ಪುರಾನಾ ಕ್ವಿಲಾ, ಸಪ್ಧರ್ ಜಂಗ್ ಸಮಾಧಿ, ಅಗರ್ ಸೇನ್ ಕಿ ಬವೋಲಿ, ಒಡಿಶಾದ ಸೂರ್ಯ ದೇವಾಲಯ, ರತ್ನಗಿರಿ ಸ್ಮಾರಕ, ರಾಜರಾಣಿ ದೇವಾಲಯ, ಹಂಪಿಯ ಪಳೆಯುಳಿಕೆಗಳು, ಲೆಹ್ ಅರಮನೆ, ಅಜಂತಾ ಮತ್ತು ಎಲ್ಲೋರಾ ಗವಿಗಳು, ಕೊಚ್ಚಿಯ ಮತ್ತಂಚೇರಿ ಅರಮನೆ, ಗಂಗೋತ್ರಿ ದೇವಾಲಯ ಆವರಣ ಹಾಗೂ ಗೋಮುಖ, ಲಡಾಖ್‌ನ ಸ್ಟಾಕ್ ಕಂಗ್ರಿ ಮತ್ತು ಆಗ್ರಾದ ತಾಜ್ ಮಹಲ್ ಅನ್ನು ನಿರ್ವಹಣೆಗಾಗಿ ಖಾಸಗಿಯವರಿಗೆ ದತ್ತು ನೀಡಲು ನಿರ್ಧರಿಸಲಾಗಿತ್ತು.