ಉಗ್ರರಿಗೆ ಆರ್ಥಿಕ ನೆರವು ಪ್ರಕರಣ: ಸಯ್ಯದ್ ಸಲಹುದ್ದೀನ್ ಮನೆ ಮೇಲೆ ಎನ್ಐಎ ದಾಳಿ

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಸೊಬುಘ್'ನಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್ ನಿವಾಸದ ಮೇಲೆ ರಾಷ್ಟ್ರೀತ ತನಿಖಾ ದಳ ದಾಳಿ ನಡೆಸಿದೆ ಎಂದು ಗುರುವಾರ ತಿಳಿದುಬಂದಿದೆ...
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಸೊಬುಘ್'ನಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಹುದ್ದೀನ್ ನಿವಾಸದ ಮೇಲೆ ರಾಷ್ಟ್ರೀತ ತನಿಖಾ ದಳ ದಾಳಿ ನಡೆಸಿದೆ ಎಂದು ಗುರುವಾರ ತಿಳಿದುಬಂದಿದೆ.

ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸಯ್ಯದ್ ಸಲಹುದ್ದೀನ್ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 
2011ರ ಉಗ್ರರಿಗೆ ಆರ್ಥಿಕೆ ನೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಸಲಹುದ್ದೀನ್ ಪುತ್ರ ಸಯ್ಯದ್ ಶಾಹೀದ್ ಯೂಸುಫ್ ನನ್ನು ಬಂಧನಕ್ಕೊಳಪಡಿಸಿತ್ತು. ತನಿಖೆ ವೇಳೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯಿಂದ ಹವಾಲಾ ಹಣವನ್ನು ಪಡೆಯುತ್ತಿರುವುದಾಗಿ ಯೂಸುಫ್ ತಪ್ಪೊಪ್ಪಿಕೊಂಡಿದ್ದ ಎಂದು ಹೇಳಲಾಗುತ್ತಿತ್ತು.  
ಹಿಜ್ಬುಲ್ ನಿಂದ ಹವಾಲಾ ಹಣವನ್ನು ಪಡೆದ ಬಳಿಕ ಆ ಹಣವನ್ನು ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎಂದು ಯೂಸುಫ್ ವಿಚಾರಣೆ ವೇಳೆ ಹೇಳಿದ್ದ. ಅಲ್ಲದೆ, ಹಿಜ್ಬುಲ್ ನಿಂದ ಹಣವನ್ನು ಸಂಗ್ರಹ ಮಾಡಲು ತನಗೆ ಸಹಾಯ ಮಾಡುತ್ತಿದ್ದ ಸಹಚರರ ಹೆಸರುಗಳನ್ನು ಬಹಿರಂಗಪಡಿಸಿದ್ದ ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com