ಎನ್ಆರ್ ಐ, ವಿದೇಶಿ ಪ್ರವಾಸಿಗರಿಗೆ ಆಧಾರ್ ಪರಿಶೀಲನೆ ಇಲ್ಲದೆ ಮೊಬೈಲ್ ಸಿಮ್ ನೀಡಲು ಸರ್ಕಾರ ಚಿಂತನೆ

ಆಧಾರ್ ಸಂಖ್ಯೆ ಪಡೆದುಕೊಳ್ಳಲು ಅರ್ಹರಲ್ಲದ ಅನಿವಾಸಿ ಭಾರತೀಯರು ಮತ್ತು ವಿದೇಶಿ ಪ್ರವಾಸಿಗರ ಸಿಮ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ:  ಆಧಾರ್ ಸಂಖ್ಯೆ ಪಡೆದುಕೊಳ್ಳಲು ಅರ್ಹರಲ್ಲದ ಅನಿವಾಸಿ ಭಾರತೀಯರು ಮತ್ತು ವಿದೇಶಿ ಪ್ರವಾಸಿಗರ ಸಿಮ್ ಪರಿಶೀಲನೆ ವಿಧಾನದ ಬಗ್ಗೆ ದೂರಸಂಪರ್ಕ ಇಲಾಖೆ ಮತ್ತು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಸದ್ಯದಲ್ಲಿಯೇ ನಿರ್ಧಾರಕ್ಕೆ ಬರಲಿದೆ.
ಆಧಾರ್ ರಹಿತ ಸಿಮ್ ಗಳ ಪರಿಶೀಲನೆ ಕುರಿತು ಇನ್ನು ಎರಡು ಮೂರು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಅರುಣ ಸುಂದರರಾಜನ್ ತಿಳಿಸಿದ್ದಾರೆ.
ಆದರೆ ಆಧಾರ್ ಕಾರ್ಡು ಹೊಂದಿರುವವರು ಮತ್ತು ಆಧಾರ್ ಕಾರ್ಡು ಪಡೆಯಲು ಇರುವವರು ತಮ್ಮ ಸಿಮ್ ಗಳನ್ನು ಆಧಾರ್ ಸಂಖ್ಯೆ ಜೊತೆ ಪರಿಶೀಲನೆ ನಡೆಸಬೇಕು. ವಿದೇಶಿ ಪ್ರವಾಸಿಗರಿಗೆ ಮತ್ತು ಎನ್ಆರ್ ಐಗಳು ಪಾಸ್ ಪೋರ್ಟ್ ಮೂಲಕ ದೃಢೀಕರಣ ಮಾಡಿಕೊಳ್ಳಬಹುದು. ಆದರೆ ಈ ವಿಷಯ ಕುರಿತು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅರುಣಾ ಸುಂದರರಾಜನ್ ಹೇಳಿದ್ದಾರೆ.
ಆಧಾರ್ ಆಧಾರಿತ ದೃಢೀಕರಣ ಮೂಲಕ ಸಿಮ್ ಕಾರ್ಡು ಪರಿಶೀಲನೆಯನ್ನು ಸರಳೀಕರಿಸುವ ಕೆಲಸವನ್ನು ಸರ್ಕಾರ ಈ ವಾರ ಮಾಡಿದ್ದು, ಒಟಿಪಿ ಹಾಗೂ ಇತರ ವಿಧಾನ ಮೂಲಕ ಮೊಬೈಲ್ ಸಂಖ್ಯೆಯನ್ನು ಇತರ 12 ಸಂಖ್ಯೆಗಳ ಆಧಾರ್ ಸಂಖ್ಯೆಗೆ ಜೋಡಣೆ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com