ವ್ಹೀಲ್ ಚೇರ್ ನಿಂದ ಎದ್ದು ನಿಂತು ಓಡಾಡುವಂತೆ ವಿಕಲಾಂಗ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಜಡ್ಜ್ ಸೂಚನೆ!

ವಿಕಲಾಂಗ ವ್ಯಕ್ತಿಯನ್ನು ವ್ಹೀಲ್ ಚೇರ್ ನಿಂದ ಎದ್ದು ನಡೆದಾಡುವಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಸೂಚಿಸಿದ ಘಟನೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿಕಲಾಂಗ ವ್ಯಕ್ತಿಯನ್ನು ವ್ಹೀಲ್ ಚೇರ್ ನಿಂದ ಎದ್ದು ನಡೆದಾಡುವಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಸೂಚಿಸಿದ ಘಟನೆ ನಡೆದಿದೆ.
ಸುಪ್ರೀಂಕೋರ್ಟ್ ಜಡ್ಜ್ ಅರುಣ್ ಕುಮಾರ್ ಮಿಶ್ರಾ ಅವರು, ವಿಕಲಾಂಗ ವ್ಯಕ್ತಿಗೆ ಎದ್ದು ನಿಂತು ವೇದಿಕೆಯತ್ತ ಬರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಆತನ ಮಗ ಆತನನ್ನು ಪೋಡಿಯಂ ವರೆಗೂ ಎಳೆದು ಕೊಂಡು ಬಂದಿದ್ದಾನೆ.
ವ್ಯಕ್ತಿಗೆ ನಡೆಯಲು ಸಾಧ್ಯವಿಲ್ಲ ಎಂಬುದು ಖಚಿತವಾದ ಮೇಲೆ ನ್ಯಾಯ ಪೀಠ ವಿಶೇಷ ರಜಾ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದೆ.
ಈ ಸಂಬಂಧ ವಕೀಲ ನಮಿತ್ ಸಕ್ಸೇನಾ ಟ್ವೀಟ್ ಮಾಡಿದ್ದು ಕರುಣೆ ಎಂಬುದು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಇದೊಂದು ಅನಾವಶ್ಯಕ ನಡೆ ಎಂದು ಟ್ವೀಟ್ ಮಾಡಿದ್ದಾರೆ. ಜಡ್ಜ್ ಅವರ ಈ ನಡೆಗೆ ಟ್ವಿಟ್ಟರ್ ನಲ್ಲಿ ಹಲವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com